Home » Website » News from jrlobo's Office » ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ
ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ
Image fom post regarding ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಮಂಗಳೂರು: 2013-14ನೇ ಸಾಲಿನ ಎಸ್.ಎಫ್.ಸಿ. ನಿಧಿಯಿಂದ ಸುಮಾರು 20 ಲಕ್ಷ ವೆಚ್ಚದ ಕಂಕನಾಡಿ-ವೆಲೆನ್ಸಿಯಾ ವಾರ್ಡಿನ ನಾಗುರಿ ಸೊಸೈಟಿ ಬಳಿ ಚರಂಡಿ ರಚನೆ ಕಾಮಗಾರಿಯ ಹಾಗೂ ನಗರ ಪಾಲಿಕೆ ಸದಸ್ಯರ ಕ್ಷೇತ್ರಾಭಿವ್ರದ್ಧಿ ನಿಧಿಯಿಂದ ಸುಮಾರು 10 ಲಕ್ಷ ವೆಚ್ಚದಲ್ಲಿ ಒಳಚರಂಡಿ ಹಾಗೂ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಜೆ.ಅರ್.ಲೋಬೊರವರು ನೆರವೇರಿಸಿದರು.

ಸ್ಥಳಿಯ ಕಾರ್ಪೋರೇಟರ್ ಆಶಾ ಡಿ’ಸಿಲ್ವ, ವಾರ್ಡಿನ ಅಧ್ಯಕ್ಷ ಹೇಮಂತ್ ಗರೋಡಿ, ಶಶಿರಾಜ್ ಅಬ್ಬಟ್ಟು, ಉಧ್ಯಮಿ ಉಮೇಶ್ ಸಾಲಿಯನ್, ಆಶೋಕ್ ಅಂಚನ್, ಬೇಬಿರಾಜ್, ಪ್ರದೀಪ್ ಗರೋಡಿ ಮತ್ತಿತ್ತರು ಉಪಸ್ಥಿತರಿದ್ದರು.