Home » Website » News from jrlobo's Office » ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುತ್ತಾರೆ : ಶಾಸಕ ಜೆ.ಆರ್.ಲೋಬೊ
JRLobo
Photography of JRLobo in office

ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುತ್ತಾರೆ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವಂತೆ ಕಳೆದ ಒಂದೂವರೆ ವರ್ಷದಿಂದ ಪ್ರಯತ್ನ ಮಾಡುತ್ತಿದ್ದು ಈಗ ಸಂಜೆ ಪಾಲಿಟೆಕ್ನಿಕ್ ಕೊಟ್ಟಿರುವುದು ಹರ್ಷ ತಂದುಕೊಟ್ಟಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.

ಈ ಬಗ್ಗೆ ಅವರು ಒಂದೂವರೆ ವರ್ಷದಿಂದ ಇಂಜಿನಿಯರಿಂಗ್ ಕಾಲೇಜಿಗೆ ಪ್ರಯತ್ನಿಸುತ್ತಿದ್ದು ಇತ್ತೀಚೆಗೆ ಮುಖ್ಯಮಂತ್ರಿಯವರು ಮಂಗಳೂರಿಗೆ ಬಂದಿದ್ದಾಗಲೂ ಒತ್ತಡ ಹೇರಲಾಗಿತ್ತು. ಮೊದಲ ಹಂತದಲ್ಲಿ ಸಂಜೆ ಪಾಲಿಟೆಕ್ನಿಕ್ ನೀಡಿದ್ದು ಬರುವ ದಿನಗಳಲ್ಲಿ ಇಂಜಿನಿಯರಿಂಗ್ ಕಾಲೇಜು ಕೊಡಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಒಮ್ಮೆ ಹಗಲೂ ಹೊತ್ತಲ್ಲಿ ಇಂಜಿನಿಯರಿಂಗ್ ಕಾಲೇಜು ಕೊಟ್ಟರೆ ನಂತರ ಸಂಜೆ ಇಂಜಿನಿಯರಿಂಗ್ ಕಾಲೇಜು ಕೊಡಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಸಧ್ಯಕ್ಕೇ ಸಂಜೆ ಪಾಲಿಟೆಕ್ನಿಕ್ ಕೊಟ್ಟಿರುವುದಕ್ಕೆ ಅವರು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ ಆದಷ್ಟು ಬೇಗ ಇಂಜಿನಿಯರಿಂಗ್ ಕಾಲೇಜನ್ನು ಕೂಡಾ ಮಂಜೂರು ಮಾಡುತ್ತಾರೆ ಶಾಸಕ ಜೆ.ಆರ್.ಲೋಬೊ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.