Home » Website » News from jrlobo's Office » ಇಂದು ಉಚಿತ ವೈದ್ಯಕೀಯ ಶಿಬಿರ
JRLobo
Photography of JRLobo in office

ಇಂದು ಉಚಿತ ವೈದ್ಯಕೀಯ ಶಿಬಿರ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, 26 ನೇ ದೇರೆಬೈಲ್ ಕಾಂಗ್ರೆಸ್ ವಾರ್ಡ್ ಸಮಿತಿ ವತಿಯಿಂದ 9 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಾಂಧಿ ನಗರ ದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ವೈದ್ಯಕೀಯ, ದಂತ ವೈದ್ಯಕೀಯ, ಮಹಿಳೆಯರಿಗೆ ಥೈರಾಯಿಡ್ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಶಿಬಿರದಲ್ಲಿ ಕೆ.ಎಮ್.ಸಿ ಆಸ್ಪತ್ರೆ, ಎ.ಜೆ.ಆಸ್ಪತ್ರೆ, ಫಾದರ್ ಮುಲ್ಲರ್ಸ್, ಕರ್ನಾಟಕ ಆಯುರ್ವೇದಿಕೆ, ಆಯುಷ ಇಲಾಖೆ, ಆಯುಷ ವೈದ್ಯಾಧಿಕಾರಿಗಳು, ಮಂಗಳೂರು ನಗರ ಪಾಲಿಕೆ, ನಗರ ಆರೋಗ್ಯ ಕೇಂದ್ರದವರು ಭಾಗವಹಿಸುತ್ತಾರೆ.

ಶಾಸಕ ಜೆ.ಆರ್.ಲೋಬೊ ಅವರ ನೇತ್ರತ್ವದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಕಣ್ಣು, ಕಿವಿ, ಗಂಟಲು, ಮೂಳೆ, ಸ್ತ್ರೀ ರೀಗ, ಚರ್ಮ, ಸಾಮಾನ್ಯ ಕಾಯಿಲೆಗಳು ಹಾಗೂ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು.

ಶಿಬಿರದಲ್ಲಿ ಅಗತ್ಯವುಳ್ಳವರಿಗೆ ಓದುವ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಅವರು ವಿನಂತಿಸಿದ್ದಾರೆ.