Home » Website » News from jrlobo's Office » ಉರ್ವ ಸ್ಟೋರ್, ಬೊಕ್ಕಪಟ್ಣ ಹಾಗೂ ಯೆಯ್ಯಾಡಿ ಕುಂದಳಿಕೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಮತಯಾಚನೆ
ಉರ್ವ ಸ್ಟೋರ್, ಬೊಕ್ಕಪಟ್ಣ ಹಾಗೂ ಯೆಯ್ಯಾಡಿ ಕುಂದಳಿಕೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಮತಯಾಚನೆ
Image from post regarding ಉರ್ವ ಸ್ಟೋರ್, ಬೊಕ್ಕಪಟ್ಣ ಹಾಗೂ ಯೆಯ್ಯಾಡಿ ಕುಂದಳಿಕೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಮತಯಾಚನೆ

ಉರ್ವ ಸ್ಟೋರ್, ಬೊಕ್ಕಪಟ್ಣ ಹಾಗೂ ಯೆಯ್ಯಾಡಿ ಕುಂದಳಿಕೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಮತಯಾಚನೆ

ದಿನಾಂಕ: 06.05.2018ರಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ.ಜೆ.ಆರ್.ಲೋಬೊ ರವರು ಉರ್ವಸ್ಟೋರ್, ಬೊಕ್ಕಪಟ್ಣ ಹಾಗೂ ಯೆಯ್ಯಾಡಿ ಕುಂದಳಿಕೆ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರಲ್ಲಿ ಕಾಂಗ್ರೇಸ್ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು. ಮಧ್ಯದಲ್ಲಿ ಅವರು ಬೊಕ್ಕಪಟ್ಣದಲ್ಲಿರುವ ಶ್ರೀ. ಅಯ್ಯಪ್ಪ ಸ್ಥಾಯಿ ಮಂದಿರ ಹಾಗೂ ಶ್ರೀ. ಬೊಬ್ಬರ್ಯ ದೇವಸ್ಥಾನಗಳಿಗೆ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ಲೋಬೊರವರು, ಕಳೆದ 5 ವರ್ಷಗಳ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಸಾಕಷ್ಟು ಕಾಮಗಾರಿಗಳು ಆಗಿದೆ. ಮಂಗಳೂರು ನಗರದಲ್ಲಿ ಸಾಕಷ್ಟು ಕಾಮಗಾರಿಗಳು ಆಗಿದೆ. ಮಂಗಳೂರನ್ನು ಅಭಿವೃದ್ಧಿಪಡಿಸಿ ರಾಷ್ಟ್ರದಲ್ಲಿಯೇ ಅತ್ಯುತ್ತಮ ನಗರವನ್ನಾಗಿ ಮಾರ್ಪಡಿಸುವುದು ನಮ್ಮ ಕರ್ತವ್ಯ. ಇದಕ್ಕೆ ಜನರ ಸಹಕಾರ ಅತೀ ಅಗತ್ಯ. ಈಗಾಗಲೇ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿ, ಮಾರುಕಟ್ಟೆಗಳ ಅಭಿವೃದ್ಧಿಗೆ ಯೋಜನೆಯನ್ನು ಹಾಕಿದ್ದೇವೆ. ಬಡವರಿಗೆ ಮನೆಯನ್ನು ನೀಡುವ ಸಲುವಾಗಿ ಈಗಾಗಲೇ ಶಕ್ತಿನಗರದಲ್ಲಿ ವ್ಯವಸ್ಥೆಯನ್ನು ಮಾಡಿದ್ದೇವೆ. ಕೆರೆಗಳ ಅಭಿವೃದ್ಧಿಯನ್ನು ಈಗಾಗಲೇ ಪ್ರಾರಂಭಿಸಿದ್ದೇವೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಷ್ಟು ಯಶಸ್ವಿಯಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅಭ್ಯರ್ಥಿಯೊಂದಿಗೆ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಕಾರ್ಪೋರೇಟರ್‍ಗಳಾದ ರಾಧಾಕೃಷ್ಣ, ಲತಾ ಸಾಲ್ಯಾನ್, ಪಕ್ಷದ ಪ್ರಮುಖರಾದ ಮೋಹನ್ ಶೆಟ್ಟಿ, ಕಮಲಾಕ್ಷ ಸಾಲಿಯಾನ್, ಮರಿಯಮ್ಮ ಥಾಮಸ್, ಅರುಣ್ ಕುವೆಲ್ಲೊ, ದೀಪಕ್ ಶ್ರೀಯಾನ್, ರಾಜೇಶ್ ಬೆಂಗ್ರೆ, ಸುರೇಶ್ ಕದ್ರಿ, ಗಣೇಶ್, ಮನೋಜ್, ಪ್ರಕಾಶ್, ಜಯಲಕ್ಷ್ಮೀ, ನಿಮ್ಯ ಯೆಯ್ಯಾಡಿ, ಪುಷ್ಪರಾಜ್, ರಾಕೇಶ್ ದೇವಾಡಿಗಾ, ರಾಹುಲ್ ಪೂಜಾರಿ, ವಿಠಲ ಶೆಟ್ಟಿಗಾರ, ವಿಧ್ಯಾದರ, ಕೃತಿನ್ ಕುಮಾರ್ ಮೊದಲಾದವರು ಇದ್ದರು.

ಉರ್ವ ಸ್ಟೋರ್, ಬೊಕ್ಕಪಟ್ಣ ಹಾಗೂ ಯೆಯ್ಯಾಡಿ ಕುಂದಳಿಕೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಮತಯಾಚನೆ