Home » Website » News from jrlobo's Office » ಒಳ ರಸ್ತೆಗಳ ಅಭಿವೃದ್ದಿ ಅಗತ್ಯ – ಲೋಬೊ
ಒಳ ರಸ್ತೆಗಳ ಅಭಿವೃದ್ದಿ ಅಗತ್ಯ – ಲೋಬೊ
Image from Post Regarding ಒಳ ರಸ್ತೆಗಳ ಅಭಿವೃದ್ದಿ ಅಗತ್ಯ – ಲೋಬೊ

ಒಳ ರಸ್ತೆಗಳ ಅಭಿವೃದ್ದಿ ಅಗತ್ಯ – ಲೋಬೊ

ಮಂಗಳೂರು,ಸೆ.27: ಮಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅನೇಕ ವಿಸ್ತ್ರತ ಪ್ರದೇಶಗಳಿರುವುದರಿಂದ ಇಲ್ಲಿ ಸರಿಯಾದ ರಸ್ತೆಗಳು ಇಲ್ಲದಿರುವುದರಿಂದ ಜನರಿಗೆ ಬಹಳಷ್ಟು ತೊಂದರೆಯಾಗಿದೆ ಆದ್ದರಿಂದ ಇದನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ರಸ್ತೆಗಳನ್ನು ಅಭಿವೃದ್ದಿಗೊಳಿಸುವುದು ನಮ್ಮೆಲ್ಲರ ಗುರಿಯಾಗಿದೆ ರಾಜ್ಯ ಸರಕಾರದ ವಿಶೇಷ ಅನುದಾನ ನಿಧಿಯಿಂದ ಬಳಸಲ್ಪಡುವ ಮೊತ್ತವನ್ನು ಇಲ್ಲಿನ ಪ್ರೀತಿನಗರ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸುವ ನಿಟ್ಟಿನಲ್ಲಿ ಇಂದು ಇಲ್ಲಿ ಶಂಕುಸ್ಥಾಪನೆ ಮಾಡಿದ್ದೇವೆ ಇದರ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡು ಇಲ್ಲಿನ ಸಾರ್ವಜನಿಕರು ಉಪಯೋಗಿಸುವಂತಾಗಲಿ ಎಂದು ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ನಗರದ ಶಕ್ತಿನಗರದ ಮಹಮ್ಮಾಯಿ ದೇವಸ್ಥಾನದ ಬಳಿಯಿರುವ ಪ್ರೀತಿನಗರ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯ ಶಿಲಾನ್ಯಾಸಗೈದು ಮಾತನಾಡುತ್ತಿದ್ದರು ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ಮಹಾಬಲ ಮಾರ್ಲ ಕಾಪೆರ್Çೀರೆಟರ್ ಅಖಿಲ ಆಳ್ವ, ಕಾಂಗ್ರೇಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಅರುಣ್ ಕುವೆಲ್ಲೊ, ಟಿ.ಕೆ.ಸುದೀರ್, ಪುರಂದರದಾಸ ಕೂಳೂರು, ವನಿತ್ ಕುಮಾರ್, ಮೋಹನ್ ಮೆಂಡನ್, ಬ್ಯಾಪ್ಟೀಸ್ಟ್ ಡಿ’ಸೋಜ, ಯಶವಂತ ಪ್ರಭು, ಕಿಶೋರ್, ಕೃತಿನ್ ಕುಮಾರ್, ಜಲಜಾಕ್ಷಿ, ವಸಂತಿ ಮೋಹಿನಿ, ಚಿತ್ರ, ಹಾಗೂ ಪಾಲಿಕೆಯ ಇಂಜಿನಿಯರ್ ರಘುಪಾಲ್, ಮೊದಲಾದವರು ಉಪಸ್ಥಿತರಿದ್ದರು.