Home » Website » News from jrlobo's Office » ಕಂಕನಾಡಿ ಗರೋಡಿ ಬ್ರಹ್ಮಕಲಶೋತ್ಸವಕ್ಕೆ ತುರ್ತು ಕೆಲಸ ಕೈಗೊಳ್ಳಿ: ಶಾಸಕ ಜೆ.ಆರ್.ಲೋಬೊ
ಕಂಕನಾಡಿ ಗರೋಡಿ ಬ್ರಹ್ಮಕಲಶೋತ್ಸವಕ್ಕೆ ತುರ್ತು ಕೆಲಸ ಕೈಗೊಳ್ಳಿ: ಶಾಸಕ ಜೆ.ಆರ್.ಲೋಬೊ
Image from post regarding ಕಂಕನಾಡಿ ಗರೋಡಿ ಬ್ರಹ್ಮಕಲಶೋತ್ಸವಕ್ಕೆ ತುರ್ತು ಕೆಲಸ ಕೈಗೊಳ್ಳಿ: ಶಾಸಕ ಜೆ.ಆರ್.ಲೋಬೊ

ಕಂಕನಾಡಿ ಗರೋಡಿ ಬ್ರಹ್ಮಕಲಶೋತ್ಸವಕ್ಕೆ ತುರ್ತು ಕೆಲಸ ಕೈಗೊಳ್ಳಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸರ್ಕಾರ ಇಲಾಖೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ ಭೇಟಿ ನೀಡಿ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಈ ಗರಡಿಯ ಬ್ರಹ್ಮ ಕಲಶೋತ್ಸವ 25.12.2017 ರಿಂದ 28.12.2017 ರವರೆಗೆ ನಡೆಯಲ್ಲಿದ್ದು ಈ ಅವಧಿಯಲ್ಲಿ ಎಲ್ಲಾ ಕೆಲಸ ಕಾರ್ಯಗಳು ಸುಶೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಆಗ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಶಾಸಕ ಜೆ.ಆರ್.ಲೋಬೊ ಅವರು ಒಳಚರಂಡಿ, ರಸ್ತೆ, ಪೆÇಲೀಸ್ ವ್ಯವಸ್ಥೆ, ಮೆಸ್ಕಾಂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಸಂಬಂಧ ತುರ್ತಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಭೆಯಲ್ಲಿ ಕ್ಷೇತ್ರದ ಅಧ್ಯಕ್ಷರಾದ ಕೆ.ಚಿತ್ತರಂಜನ್, ಮಂಗಳೂರು ಮಹಾನಗರಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವಾ, ಆಶಾ ಡಿ’ಸಿಲ್ವಾ, ಕಂದಾಯ ಇಲಾಖೆ ಅಧಿಕಾರಿ ಮಂಜುನಾಥ್ ಶೆಟ್ಟಿ, ಮೆಸ್ಕಾಂ ಅಧಿಕಾರಿ ಗಾಯತ್ರಿ ನಾಯಕ್, ಕ್ಷೇತ್ರದ ಮೊಕ್ತೇಸರರಾದ ಜೆ. ಸುರೇಂದ್ರನಾಥ್, ವಾಮನ ಕೇಶವ ಅಂಗಡಿಮಾರ್, ಕ್ಷೇತ್ರದ ಮ್ಯಾನೇಜರ್ ಜೆ.ಕಿಶೋರ್ ಕುಮಾರ್ ಮಜಿಲ, ಎಪಿಎಂಸಿ ಸದಸ್ಯ ಭರತೇಶ್ ಅಮೀನ್ ಉಪಸ್ಥಿತರಿದ್ದರು.

ಸಂದೀಪ್ ಸಾಲ್ಯಾನ್ ಸ್ವಾಗತಿದರು, ಪ್ರವೀಣ್ ಚಂದ್ರ ಆಳ್ವ ವಂದಿಸಿದರು.