Home » Website » News from jrlobo's Office » ಕಾಪಿಕಾಡ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತಯಾಚನೆ
ಕಾಪಿಕಾಡ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತಯಾಚನೆ
Image from post regarding ಕಾಪಿಕಾಡ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತಯಾಚನೆ

ಕಾಪಿಕಾಡ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತಯಾಚನೆ

ದಿನಾಂಕ: 29.04.2018ರಂದು ಸಂಜೆ ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂಬ್ರ 24 ದೇರೆಬೈಲು ವ್ಯಾಪ್ತಿಯಲ್ಲಿರುವ ಕಾಪಿಕಾಡ್ ಪರಿಸರದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಜೆ.ಆರ್.ಲೋಬೊ ರವರು ಮನೆ ಮನೆಗೆ ಭೇಟಿ ನೀಡಿ ಕಾಂಗ್ರೇಸ್ ಪಕ್ಷದ ಪರವಾಗಿ ಮತ ಯಾಚಿಸಿದರು. ಬಹಳಷ್ಟು ಕ್ಷೇತ್ರದ ಉದ್ದಗಲಕ್ಕೂ ಕೆಲಸಗಳು ಆಗಿರುವುದರಿಂದ ಜನರು ಬಹಳ ಸಂತುಷ್ಟರಾಗಿದ್ದರು. ಮಗದೊಮ್ಮೆ ಲೋಬೊರವರು ಶಾಸಕರಾಗಿ ಆಯ್ಕೆಯಾಗಿ ಬರಲೆಂದು ಕಾಪಿಕಾಡ್ ಪ್ರದೇಶದ ಜನರು ಹಾರೈಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅಭ್ಯರ್ಥಿ ಲೋಬೊ ರವರು ಮಾತನಾಡುತ್ತಾ, ಮಂಗಳೂರಿನ ರಸ್ತೆ, ಪುಟ್‍ಪಾತ್, ಮಾರುಕಟ್ಟೆ ಅಭಿವೃದ್ಧಿ, ಕದ್ರಿ ಪಾರ್ಕ್ ಅಭಿವೃದ್ಧಿ, ಕದ್ರಿ ಪುಟಾಣಿ ರೈಲು, ಬಡವರಿಗೆ ಸೂರು, ನಿವೇಶನ, ಹಕ್ಕುಪತ್ರ ವಿತರಣೆ, ಕೆರೆ ಅಭಿವೃದ್ಧಿ ಹೀಗೆ ಅನೇಕ ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸಿದ್ದೇನೆ. ಖಂಡಿತವಾಗಿಯೂ ಜನರು ನನ್ನನ್ನೂ ಮಗದೊಮ್ಮೆ ಶಾಸಕನಾಗಿ ಆಯ್ಕೆ ಮಾಡುತ್ತಾರೆ ಎಂದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಉಪಮೇಯರ್ ರಜನೀಶ್, ಕಾರ್ಪೋರೇಟರ್ ಪ್ರಕಾಶ್ ಸಾಲ್ಯಾನ್, ಸಂತೋಷ್ ಶೆಟ್ಟಿ, ರಾಜೇಂದ್ರ, ಶೇಖರಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.