Home » Website » News from jrlobo's Office » ಕಾರ್ ಸ್ಟ್ರೀಟ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಮತ ಯಾಚನೆ.
ಕಾರ್ ಸ್ಟ್ರೀಟ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಮತ ಯಾಚನೆ.
Image from post regarding ಕಾರ್ ಸ್ಟ್ರೀಟ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಮತ ಯಾಚನೆ.

ಕಾರ್ ಸ್ಟ್ರೀಟ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಮತ ಯಾಚನೆ.

ಇಂದು ತಾ.29-04-2018ರಂದು ಬೆಳಿಗ್ಗೆ, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ.ಜೆ.ಆರ್.ಲೋಬೊರವರು ನಗರದ ಕಾರ್ ಸ್ಟ್ರೀಟ್ , ವಿ.ಟಿ.ರಸ್ತೆ, ಗಣಪತಿ ದೇವಸಾÀ್ಥನದ ಪರಿಸರದಲ್ಲಿರುವ ನೂರಾರು ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಯಾಚನೆ ನಡೆಸಿದರು. ಪ್ರಾರಂಭದಲ್ಲಿ ಕಾರ್ ಸ್ಟ್ರೀಟ್‍ನ ಶ್ರೀ ವೆಂಕಟರಮಣ ದೇವಸ್ಥಾನದ ಸನ್ನಿಧಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಮನೆಮನೆಗೆ ಮತಯಾಚನೆ ಸಡೆಸುವ ವೇಳೆಯಲ್ಲಿ ಅವರು ಶ್ರೀ ಲಕ್ಷ್ಮೀನರಸಿಂಹ ಮಠ, ಶ್ರೀ ಕಾತ್ಯಾಯಣಿ ಮಠ, ಶ್ರೀಪಾರ್ವತಿ ಆಚಾರ್ಯ ಮಠಗಳಿಗೆ ಭೇಟಿ ನೀಡಿದರು.

ಅನೇಕ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಅಭ್ಯರ್ಥಿ ಲೋಬೊರವರ ಜೊತೆಗೆ ಹೆಜ್ಜೆ ಹಾಕಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಲೋಬೊರವರು, ಕಳೆದ 5 ವರ್ಷಗಳ ಅವಧಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಮುಖ್ಯರಸ್ತೆಗಳಿಗೆ ಕಾಂಕ್ರಿಟೀಕರಣ ನಡೆಸಲಾಗಿದೆ. ಅದಲ್ಲದೇ ಒಳ ರಸ್ತೆಗಳಿಗೂ ಹೆಚ್ಚಿನ ಆದ್ಯತೆ ನೀಡಿ ಅದನ್ನೂ ಅಭಿವೃದ್ಧಿ ಪಡಿಸಲಾಗಿದೆ. ಮಂಗಳೂರು ನಗರ ಅಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರ ಮಹತ್ವದ್ದು. ಮಂಗಳೂರಿನ ಜನತೆ ಅಭಿವೃದ್ಧಿ ಕಡೆಗೆ ಬೆಂಬಲ ಸೂಚಿಸಿದ್ದಾರೆ. ಜನತೆಯ ನಿರೀಕ್ಷೆಯನ್ನು ನಾವು ಎಂದಿಗೂ ಹುಸಿ ಮಾಡುವುದಿಲ್ಲ. ಜನರ ನಿರೀಕ್ಷೆಯಂತೆ ಮಂಗಳೂರನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಕಾರ್ಪೋರೇಟರ್ ರಾಮ್‍ದಾಸ್ ಪ್ರಭು, ಪಕ್ಷದ ಪ್ರಮುಖರಾದ ಮೋಹನ್ ಶೆಟ್ಟಿ , ಮೋಹನ್ ಮೆಂಡನ್, ವಿಜಯೇಂದ್ರ ಭಟ್, ಸುರೇಂದ್ರ ಶೆಣೈ, ಸಮರ್ಥ ಭಟ್ , ಶಾಂತಲಾ ಗಟ್ಟಿ, ವಿಘ್ನೇಶ್ , ವಿನುತಾ ಭಟ್, ಶ್ರೇಯಸ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ ಸ್ಟ್ರೀಟ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಮತ ಯಾಚನೆ.