ಮಂಗಳೂರು,ನ.04: ದಕ್ಷಿಣ ವಿದಾನಸಭಾ ಕ್ಷೇತ್ರದ ಪದವು ಪೂರ್ವ ವಾರ್ಡಿನಲ್ಲಿ ಸಣ್ಣ ನೀರಾವರಿ ಯೋಜನೆಯ ನಬಾರ್ಡ್ ಕಾಮಗಾರಿಯ ಗುದ್ದಲಿ ಪೂಜೆಯು 9.30 ಗಂಟೆಗೆ ದಕ್ಷಿಣ ವಿದಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಶಿಲಾನ್ಯಾಸ ನೆರವೇರಿಸಿದರು. ಶಾಸಕರಾದ ಶ್ರೀ ಜೆ.ಆರ್ ಲೋಬೊರವರುವಿಷೇಶ ಶಿಪಾರಸ್ಸಿನ ಮೇರೆಗೆ ಕುಲಶೇಖರ ಗ್ರಾಮದ ಬೈತುರ್ಲಿಯಲ್ಲಿರುವ ಮಳೆ ನೀರಿನ ತೋಡಿಗೆ ತಡೆ ಗೋಡೆ ನಿರ್ಮಾಣಕ್ಕಾಗಿ 12 ಲಕ್ಷ ಕುಡುಪು ಗ್ರಾಮದ ಕಲ್ಲುರ್ಟಿ ದೈವಸ್ಥಾನದ ಬಳಿ ತೋಡಿಗೆ ತಡೆಗೋಡೆ ನಿರ್ಮಾಣಕ್ಕಾಗಿ 13 ಲಕ್ಷ, ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಲಾಯಿತು. ಈ ಸಂದರ್ಭದಲ್ಲಿ ಕಾಪೆರ್Çೀರೆಟರಾದ ಭಾಸ್ಕರ್,ಸುಬ್ರಮಣ್ಯ ಬಟ್ರು, ರಾಮದಾಸ, ಡೆನ್ನಿಸ್ ಡಿ’ಸಿಲ್ವ, ದೇಜಪ್ಪ , ಚಂದ್ರಹಾಸ, ಗಣೇಶ, ನಾಗೇಶ, ಕೇಶವ, ಉದಯ ಕುಡುಪು, ನಾಗೇಶ ವಾಮಂಜೂರು ಮುಂತಾದವರು ಉಪಸ್ಥಿತರಿದ್ದರು.

Image from Post Regarding ಕ್ಷೇತ್ರದ ಪದವು ಪೂರ್ವ ವಾರ್ಡಿನಲ್ಲಿ ನೀರಾವರಿ ಯೋಜನೆಯ ನಬಾರ್ಡ್ ಕಾಮಗಾರಿಯ ಗುದ್ದಲಿ ಪೂಜೆಯುನ ಶ್ರೀ ಜೆ.ಆರ್ ಲೋಬೊರವರು ಶಿಲಾನ್ಯಾಸ ನೆರವೇರಿಸಿದರು