Home » Website » News from jrlobo's Office » ಜನರಿಗೆ ವಿರುದ್ಧವಾದ ನಿರ್ಣಯ ತೆಗೆದುಕೊಳ್ಳಬೇಡಿ: ಶಾಸಕ ಜೆ.ಆರ್. ಲೋಬೊ
ಜನರಿಗೆ ವಿರುದ್ಧವಾದ ನಿರ್ಣಯ ತೆಗೆದುಕೊಳ್ಳಬೇಡಿ: ಶಾಸಕ ಜೆ.ಆರ್. ಲೋಬೊ
Image from post regarding ಜನರಿಗೆ ವಿರುದ್ಧವಾದ ನಿರ್ಣಯ ತೆಗೆದುಕೊಳ್ಳಬೇಡಿ: ಶಾಸಕ ಜೆ.ಆರ್. ಲೋಬೊ

ಜನರಿಗೆ ವಿರುದ್ಧವಾದ ನಿರ್ಣಯ ತೆಗೆದುಕೊಳ್ಳಬೇಡಿ: ಶಾಸಕ ಜೆ.ಆರ್. ಲೋಬೊ

ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ಕುಲಶೇಖರದಿಂದ ಬೈತುರ್ಲಿಯವರೆಗೆ ಹೆದ್ದಾರಿಯ ಬಗ್ಗೆ ಸ್ಥಳೀಯರು ಆಕ್ಷೇಪಗಳ ಬಗ್ಗೆ ಸ್ಥಳ ಪರಿಶೀಲಿಸಿದರು.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಗ್ಗೆ ಹೆದ್ದಾರಿಯ ಕುರಿತು ಸ್ಥಳೀಯ ಜನರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಜೆ.ಆರ್.ಲೋಬೊ ಅವರು ಖುದ್ದು ಸ್ಥಳ ವೀಕ್ಷಣೆ ಮಾಡಿದರು.

ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಶಾಸಕರು ರಸ್ತೆ ಅಲ್ಮೈನ್ ಮೆಂಟ್ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿದ ಆಕ್ಷೇಪಗಳ ಬಗ್ಗೆ ವಿವರಿಸಿದರು.

ಈ ಎಲ್ಲಾ ಆಕ್ಷೇಪಗಳನ್ನು ಪರಿಶೀಲಿಸಿ ಜನರಿಗೆ ವಿರುದ್ಧವಾಗಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಹೆದ್ದಾರಿ ಅಧಿಕಾರಿಗಳು ಶಾಸಕರಿಗೆ ವಿವರ ನೀಡಿ ತಾವು ಜನರಿಗೆ ವಿರುದ್ದವಾಗಿ ಯಾವುದೇ ನಿರ್ಧಾರ ತೆಗೆದುದುಕೊಳ್ಳುವುದಿಲ್ಲ ಎಂದು ತಿಳಿಸಿದರು.