Home » Website » News from jrlobo's Office » ಜನಸಂಪರ್ಕ ಸಭೆಯ ದೂರುಗಳಿಗೆ ಸ್ಪಂದಿಸಿ : ಶಾಸಕ ಜೆ.ಆರ್.ಲೋಬೊ
JRLobo
Photography of JRLobo in office

ಜನಸಂಪರ್ಕ ಸಭೆಯ ದೂರುಗಳಿಗೆ ಸ್ಪಂದಿಸಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಜನ ನೀಡುವ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಪರಿಹಾರ ಕೊಡುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ತಾಕೀತು ಮಾಡಿದರು.

ಅವರು ಅಳಪೆ ಉತ್ತರವಾರ್ಡಿನ ನಿಡ್ಡೇಲ್ ಪ್ರದೇಶದಲ್ಲಿ ನೋರ್ಬಟ್ ಡಿ’ಸೋಜ ಅವರ ಮನೆ ವಠಾರದಲ್ಲಿ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಸ್ಥಳೀಯರು ಕೊಟ್ಟ ಮನವಿಗೆ ಉತ್ತರಿಸಿ ಈ ಬಗ್ಗೆ ಕಂದಾಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಅರ್ಜಿಕೊಟ್ಟವರಿಗೆ ಪರಿಹಾರ ಕೊಡುವಂತೆ ಸೂಚಿಸಿದರು.

ಸಭೆಯಲ್ಲಿ ಸ್ಥಳೀಯರು ಮಂಗಳೂರು ಮಹಾನಗರಪಾಲಿಕೆ, ಪೆÇಲೀಸ್ ಇಲಾಖೆಯ ಬಗ್ಗೆ ಸ್ಥಳೀಯರು ಅಹವಾಲು ಸಲ್ಲಿಸಿದ್ದನ್ನು ಶಾಸಕ ಜೆ.ಆರ್.ಲೋಬೊ ಅವರು ಸಾವಧಾನದಿಂದ ಆಲಿಸಿ ಯಾವುದೇ ಸಮಸ್ಯೆ ಬಂದಾಗ ಅಧಿಕಾರಿಗಳು ಕೂಡಾ ಸಮಾಧಾನದಿಂದ ಆಲೋಚಿಸಿ ಕ್ರಮ ತೆಗೆದುಕೊಳ್ಳುವುದು ಸೂಕ್ತ. ಈ ಬಗ್ಗೆ ಯಾವುದೇ ಗೊಂದಲಮಾಡಿಕೊಳ್ಳುವುದು ತರವಲ್ಲ ಎಂದು ಹೇಳಿದರು.

ಈ ಸಭೆಯಲ್ಲಿ ಒಳಚಂರಂಡಿ ಮತ್ತು ರಸ್ತೆಗಳ ನಿರ್ವಹಣೆ ಬಗ್ಗೆ ದೂರು ಬಂದಾಗ ಶಾಸಕ ಜೆ.ಆರ್.ಲೋಬೊ ಅವರು ಈ ಬಗ್ಗೆ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಆದೇಶಿಸಿದರು.

ಉತ್ತರ ವಾರ್ಡ್ ನ ಕಾಪೆರ್Çರೇಟರ್ ಬಿ.ಪ್ರಕಾಶ್, ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಡೆನ್ನಿಸ್ ಡಿ’ಸಿಲ್ವ, ಕಾರ್ಯದಕ್ಷ ಹೆನ್ರಿ ಡಿ’ಸೋಜ ಉಪಸ್ಥಿತರಿದ್ದರು.

ಮಹಾನಗರಪಾಲಿಕೆಯ ಒಳಚರಂಡಿ ವಿಭಾಗದ ಅಧಿಕಾರಿ ವಿಶಾಲ್ ನಾಥ್, ಸಿವಿಲ್ ಅಧಿಕಾರಿ ರೂಪ, ಕಂದಾಯ ಇಲಾಖೆಯ ಸುಮಂತ್, ಪೆÇಲೀಸ್ ಇಲಾಖೆಯ ಜಾನಕಿ, ಸಂಚಾರಿ ವಿಭಾಗದ ಚಂದ್ರ ಮುಂತಾದವರು ಉಪಸ್ಥಿತರಿದ್ದರು.