Home » Website » News from jrlobo's Office » ಡಿಜಿಟಲ್ ಮಿಡಿಯಾ ಮೂಲಕ ಹಾಲಿ – ಸಂಸದನಿಗೆ ಟಾಂಗ್ ನೀಡಿದ ಕಾಂಗ್ರೆಸ್
JRLobo
Photography of JRLobo in office

ಡಿಜಿಟಲ್ ಮಿಡಿಯಾ ಮೂಲಕ ಹಾಲಿ – ಸಂಸದನಿಗೆ ಟಾಂಗ್ ನೀಡಿದ ಕಾಂಗ್ರೆಸ್

ಮಂಗಳೂರು ಕಾಂಗ್ರೆಸ್ ಸೋಶಿಯಲ್ ಮಿಡಿಯ ತಂಡ ಹಾಲಿ ಸಂಸದ ನಳಿನ್ ಕುಮಾರ್ ಅವರಿಗೆ ಟಾಂಗ್ ನೀಡುವ ಪ್ರಯತ್ನವಾಗಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಇಂಟರ್ಯಾಕ್ಟಿವ್ ವೆಬ್ ಸೈಟ್ ಸಂಪರ್ಕ ಮಾಹಿತಿಯನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರವರು ಡಿಜಿಟಲ್ ಮಿಡಿಯಾದಲ್ಲಿ ಬಹಳಷ್ಟು ಪ್ರಚಾರದಲ್ಲಿದ್ದರೂ ಉಳಿದ ಬಿಜೆಪಿ ಸಂಸದರು ಈ ವಿಚಾರದಲ್ಲಿ ಬಹಳಷ್ಟು ಹಿಂದೆ ಬಿದ್ದಿದ್ದಾರೆ. ಚುನಾವಣೆಯ ಕೊನೆಯ ಹಂತದಲ್ಲಿ ಮಿಥುನ್ ರೈ ರವರ www.mithunrai.info ಎಂಬ ಜಾಲತಾಣಕ್ಕೆ ಚಾಲನೆ ನೀಡಿದೆ. ಮಾತ್ರವಲ್ಲದೆ, ನಿಮ್ಮ ಸಂಸದ ಕಳೆದ ಹತ್ತು ವರ್ಷಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲವೆ, ಚಿಂತಿಸದಿರಿ ಮಿಥುನ್ ರೈ ಸಂಪರ್ಕಿಸಲು ನೀವು ಜಸ್ಟ್ ಕ್ಲಿಕ್ ಮಾಡಿದರೆ ಸಾಕು ಎಂಬ ಸಂದೇಶ ಹರಿಯಬಿಟ್ಟಿದ್ದಾರೆ.

ಹಾಲಿ ಸಂಸದನನ್ನು ಸಂಪರ್ಕಿಸಲು ಅಸಾಧ್ಯವಾದರೆ, ಮಿಥುನ್ ರೈ ಅವರ ವೈಬ್ ಸೈಟಿನಲ್ಲಿ ನಿಮ್ಮ ಮಿಥುನ್ ರೈ ಅವರನ್ನು ಸಂಪರ್ಕಿಸಲು ಶೇರ್ ಯುವರ್ ಕನ್ಸರ್ನ್ ಎಂಬ ಬಟನ್ ಒತ್ತಿ ನಿಮ್ಮ ದೂರು ದುಮ್ಮಾನಗಳನ್ನು ದಾಖಲಿಸಬಹುದು ಎನ್ನುವ ಸಂದೇಶ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.