Home » Website » News from jrlobo's Office » ಪಂಪ್ ವೆಲ್ ಬಸ್ ನಿಲ್ದಾಣದ ಸಮಗ್ರ ವರದಿ ಸಲ್ಲಿಸಿ : ಶಾಸಕ ಜೆ.ಆರ್.ಲೋಬೊ
ಪಂಪ್ ವೆಲ್ ಬಸ್ ನಿಲ್ದಾಣದ ಸಮಗ್ರ ವರದಿ ಸಲ್ಲಿಸಿ : ಶಾಸಕ ಜೆ.ಆರ್.ಲೋಬೊ
Image from post regarding ಪಂಪ್ ವೆಲ್ ಬಸ್ ನಿಲ್ದಾಣದ ಸಮಗ್ರ ವರದಿ ಸಲ್ಲಿಸಿ : ಶಾಸಕ ಜೆ.ಆರ್.ಲೋಬೊ

ಪಂಪ್ ವೆಲ್ ಬಸ್ ನಿಲ್ದಾಣದ ಸಮಗ್ರ ವರದಿ ಸಲ್ಲಿಸಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು:ಪಂಪ್ ವೆಲ್ ಬಸ್ ನಿಲ್ದಾಣದ ಬಗ್ಗೆ ಪ್ರಾಸ್ತಾವನೆಯ ಕುರಿತು ಸಮಗ್ರ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಂಪ್ ವೆಲ್ ಬಸ್ ನಿಲ್ದಾಣದ ಕುರಿತು ಮಾಹಿತಿ ವೀಕ್ಷಿಸಿ ಮಾತನಾಡುತ್ತಿದ್ದರು. ಬಸ್ ನಿಲ್ದಾಣದ ಕುರಿತು ನೀಡಿರುವ ಮಾಹಿತಿ ಸಮರ್ಪಕವಾಗಿಲ್ಲ. ಇದರ ಬಗ್ಗೆ ಕೂಲಂಕಷ ಮಾಹಿತಿ ಅಗತ್ಯವಿದೆ. ಖಾಸಗಿ ಸಂಸ್ಥೆಗೆ ಮಾಹಿತಿ ಒದಗಿಸುವ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದ ಅವರು ಪ್ರಾಸ್ತಾವನೆಯನ್ನು ಪರಿಶೀಲಿಸಲು ಒಂದು ತಾಂತ್ರಿಕ ಸಮಿತಿಯನ್ನು ರಚಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಪ್ರಾಸ್ತವನೆ ಬಂದ ಬಳಿಕ ನಿರ್ಧಾರವನ್ನು ತೆಗೆದುಕೊಂಡು ವರದಿಯನ್ನು ಅನುಮೋದನೆ ಸಲ್ಲಿಸುವಂತೆಯೂ ಸಭೆಗೆ ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಪಂಪ್ ವೆಲ್ ಬಸ್ ನಿಲ್ದಾಣದ ವಿನ್ಯಾಸದ ಬಗ್ಗೆ ಖಾಸಗಿ ಸಂಸ್ಥೆಗಳು ನೀಡಿದ ಪ್ರಾತ್ಯಕ್ಷಿಕೆಯನ್ನು ಸಭೆಯಲ್ಲಿ ವೀಕ್ಷಿಸಲಾಯಿತು.

ಈ ಸಭೆಯಲ್ಲಿ ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್, ಆಯುಕ್ತ ನಜೀರ್ ಅಹ್ಮದ್, ನಗರಪಾಲಿಕೆ ಮುಖ್ಯಸಚೇತಕ ಎಂ.ಶಶಿಧರ್ ಹೆಗ್ಡೆ, ರವೂಫ್ ಮುಂತಾದವರಿದ್ದರು.