Home » Website » News from jrlobo's Office » ಪಿಲಿಕುಳದಲ್ಲಿ ಅಭಿವೃದ್ಧಿ ಕಾಮಗಾರಿಗೆ 690 ಲಕ್ಷ ಮಂಜೂರು : ಜೆ.ಆರ್.ಲೋಬೊ
JRLobo
Photography of JRLobo in office

ಪಿಲಿಕುಳದಲ್ಲಿ ಅಭಿವೃದ್ಧಿ ಕಾಮಗಾರಿಗೆ 690 ಲಕ್ಷ ಮಂಜೂರು : ಜೆ.ಆರ್.ಲೋಬೊ

ಮಂಗಳೂರು: ಪಿಲಿಕುಳ ನಿಸರ್ಗ ಧಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ 690 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದ್ದಾರೆ.

ಮಂಗಳೂರು ತಾಲೂಕಿನ ವಾಮಂಜೂರು ಜಂಕ್ಷನ್ ನಿಂದ ಪಿಲಿಕುಳ ನಿಸರ್ಗಧಾಮದ ಮುಖ್ಯ ದ್ವಾರದವರೆಗೆ ಸುಮಾರು 1.5 ಕಿ.ಮೀ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಈ ಪೈಕಿ 490 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದೆ.

ಅಲ್ಲದೇ ಪಿಲಿಕುಳ ನಿಸರ್ಗಧಾಮದ ಒಳಗಡೆ ವಿವಿಧ ರಸ್ತೆಗಳ ಡಾಮರೀಕರಣಕ್ಕೆ 200 ಲಕ್ಷ ರೂಪಾಯಿಯನ್ನ್ನು ಒದಗಿಸಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದ್ದಾರೆ.