Home » Website » News from jrlobo's Office » ಬಜಾಲ್ ಫೈಸಲ್ ನಗರ – ಕಲ್ಲಕಟ್ಟೆ ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ
ಬಜಾಲ್ ಫೈಸಲ್ ನಗರ – ಕಲ್ಲಕಟ್ಟೆ ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ
Image from post regarding ಬಜಾಲ್ ಫೈಸಲ್ ನಗರ – ಕಲ್ಲಕಟ್ಟೆ ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ

ಬಜಾಲ್ ಫೈಸಲ್ ನಗರ – ಕಲ್ಲಕಟ್ಟೆ ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ

ಮಂಗಳೂರು ಮಹಾನಗರ ಪಾಲಿಕೆಯ ಬಜಾಲ್ ವಾರ್ಡ್ ವ್ಯಾಪ್ತಿಯಲ್ಲಿ ಇರುವ ಬಜಾಲ್ ಫೈಸಲ್ ನಗರದಿಂದ ಕಲ್ಲಕಟ್ಟೆ ತನಕ ನೂತನ ಕಾಂಕ್ರಿಟೀಕರಣ ರಸ್ತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಜೆ ಆರ್ ಲೋಬೊರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಾಸಕ ಲೋಬೊರವರು ಮಂಗಳೂರು ಮಹಾನಗರ ಪಾಲಿಕೆಯ ಬಜಾಲ್ ವಾರ್ಡ್ ಒಳಪ್ರದೇಶವಾಗಿದ್ದು, ರಸ್ತೆಗಳು ಅಷ್ಟೊಂದು ಒಳ್ಳೆಯದಾಗಿರಲಿಲ್ಲ. ಬಸ್ಸುಗಳು ಈ ಪ್ರದೇಶಕ್ಕೆ ಬರಲು ಹಿಂದೇಟು ಹಾಕುವ ಸ್ಥಿತಿಯಲ್ಲಿರುತ್ತಿತ್ತು. ಇಲ್ಲಿನ ಜನರು ನನಗೆ ರಸ್ತೆಯನ್ನು ಉತ್ತಮ ಪಡಿಸಲು ಮನವಿಗಳನ್ನು ಈ ಹಿಂದೆಯೇ ನೀಡಿದ್ದರು. ಇದಕ್ಕೆ ಪೂರಕವಾಗಿ ನಾನು ಮುಖ್ಯಮಂತ್ರಿ ಶ್ರೀ.ಸಿದ್ದರಾಮಯ್ಯನವರು ಮತ್ತು ಲೋಕೊಪಯೋಗಿ ಸಚಿವರಾದ ಶ್ರೀ.ಡಾ||ಮಹಾದೇವಪ್ಪರವರನ್ನು ಕೇಳಿದಾಗ ಅವರು ಮನವಿಗೆ ಸ್ಪಂದಿಸಿ ಈ ರಸ್ತೆಗೆ ರೂ 2 ಕೋಟಿ ಅನುದಾನವನ್ನು ನೀಡಿದ್ದರು. ಅದಲ್ಲದೇ ಮುಖ್ಯಮಂತ್ರಿಗಳು ರೂ. 100 ಕೋಟಿ ಅನುದಾನದಿಂದ ರೂ.1.30 ಲಕ್ಷ ಈ ರಸ್ತೆಗೆ ಮೀಸಲಿಡಲಾಗಿತ್ತು. ಸುಮಾರು 2 ಕಿ.ಮೀ ಉದ್ದದ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಿದ್ದೇವೆ. ಇದರಿಂದ ಇಲ್ಲಿನ ಸಾರ್ವಜನಿಕರ ಭವಣೆ ಸ್ವಲ್ಪ ಕಡಿಮೆ ಮಾಸಿಕ ಎಂದರು. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಗಾಳದ ಸುಮಯ್ಯ ಡಾ|| ಡಿ.ಕೆ.ಅಬ್ದುಲ್ ಹಮೀದ್, ಅಶ್ರಫ್, ಅಬ್ದುಲ್ ರವೂಫ್, ಎ.ಪಿ.ಎಮ್.ಸಿ ಸದಸ್ಯ ಭರತೇಶ್ ಅಮಿನ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ ಸುಧೀರ್, ಅಶ್ರಫ್ ಬಜಾಲ್, ಅಬೂಬಕ್ಕರ್, ಅಹ್ಮದ್ ಬಾವಾ, ಜ್ಯೋತಿ ಅಶೋಕ್, ಬಿ.ಎನ್.ಅಬ್ಬಾಸ್, ರತ್ನಮ್ಮ, ಮೇಜಿ ಡಿಸೋಜ, ಬಿ.ಕೆ ಅಝೀಝ್, ಎನ್.ಎಸ್.ಆರ್ ನಾಸೀರ್, ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.