Home » Website » News from jrlobo's Office » ಭಗಿನಿ ಸಮಾಜದಲ್ಲಿ ಶಾಸಕ ಜೆ.ಆರ್.ಲೋಬೊ ಅವರ ದೀಪಾವಳಿ ಸಂಭ್ರಮಾಚರಣೆ
ಭಗಿನಿ ಸಮಾಜದಲ್ಲಿ ಶಾಸಕ ಜೆ.ಆರ್.ಲೋಬೊ ಅವರ ದೀಪಾವಳಿ ಸಂಭ್ರಮಾಚರಣೆ
Image from post regarding ಭಗಿನಿ ಸಮಾಜದಲ್ಲಿ ಶಾಸಕ ಜೆ.ಆರ್.ಲೋಬೊ ಅವರ ದೀಪಾವಳಿ ಸಂಭ್ರಮಾಚರಣೆ

ಭಗಿನಿ ಸಮಾಜದಲ್ಲಿ ಶಾಸಕ ಜೆ.ಆರ್.ಲೋಬೊ ಅವರ ದೀಪಾವಳಿ ಸಂಭ್ರಮಾಚರಣೆ

ಮಂಗಳೂರು: ಜೆಪ್ಪುನಲ್ಲಿರುವ ಭಗಿನಿ ಸಮಾಜದಲ್ಲಿ ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ದೀಪಾವಳಿ ಸಂಭ್ರಮಾಚರಣೆ ಕಾರ್ಯಕ್ರಮ ಜರಗಿತು.

ಭಗಿನಿ ಸಮಾಜದ ಮಕ್ಕಳೊಂದಿಗೆ ಶಾಸಕ ಜೆ.ಆರ್.ಲೋಬೊ ಅವರು ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು ಈ ಹಬ್ಬವು ಎಲ್ಲರಿಗೆ ಸುಖ, ಸಮೃದ್ಧಿಯನ್ನು ನೀಡಲಿ ಎಂದು ಹಾರೈಸಿದರು.

ದೀಪಾವಳಿ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಚೈತನ್ಯದ ಬೆಳಕು ನೀಡಲಿ ಎಂದು ಹಾರೈಸಿದ ಅವರು ಹೊಸ ಉತ್ಸಾಹವನ್ನು ತರಲಿ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಲೀಂ, ಮಂಗಳೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಡೆನ್ನೀಸ್ ಡಿಸಿಲ್ವಾ, ಕಾರ್ಪೊರೇಟರ್ ಗಳು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.