Home » Website » News from jrlobo's Office » ಲೇಡಿಗೋಷನ್ ಆಸ್ಪತ್ರೆಗೆ ಭೇಟಿ
ಲೇಡಿಗೋಷನ್ ಆಸ್ಪತ್ರೆಗೆ ಭೇಟಿ
Image from Post Regarding ಲೇಡಿಗೋಷನ್ ಆಸ್ಪತ್ರೆಗೆ ಭೇಟಿ

ಲೇಡಿಗೋಷನ್ ಆಸ್ಪತ್ರೆಗೆ ಭೇಟಿ

ಮಂಗಳೂರು,ಅ.14: ಲೇಡಿಗೋಷನ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳೊಂದಿಗೆ ವಿಚಾರ ವಿನಿಮಯ ನಡೆಸಿ ನಂತರ ಅಧಿಕಾರಿಗಳೊಂದಿಗೆ ಮಾತನಾಡುತ್ತಾ ಲೇಡಿಗೋಷನ್ ಆಸ್ಪತ್ರೆಗೆ ಜಿಲ್ಲೆಯ ವಿವಿದ ಕಡೆಯಿಂದ ಅನೇಕ ಬಡ ಮಹಿಳೆಯರು ಪ್ರಸೂತಿಗೆ ಬರುತ್ತಾರೆ. ಪ್ರಸೂತಿಯ ಸಂದರ್ಭದಲ್ಲಿಮಹಿಳೆಯರಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಸಂದರ್ಭದಲ್ಲಿ ಒಂದು ತಾಯಿ ಅನುಭವಿಸುವ ನೋವು ಯಾತನೆ ಅದು ತಾಯಿಯಾಗುವವಳಿಗೆ ಮಾತ್ರ ತಿಳಿದಿದೆ. ಅಂತಹ ಸಂದರ್ಭದಲ್ಲಿ ಆ ತಾಯಿಗೆ ನೆಮ್ಮದಿಯ ಪರಿಸರ ಉತ್ತಮ ಚಿಕಿತ್ಸಾಸೌಲಬ್ಯ ಹಾಗೂ ಆರೋಗ್ಯಕರ ವಾತಾವರಣ ನಿರ್ಮಿಸಲು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ದೂರದ ಪ್ರದೇಶಗಳಿಂದ ಬರುವ ಮಹಿಳೆಯರಿಗೆ ಸೌಲಬ್ಯ ಒದಗಿಸಲು ಇಲ್ಲಿ ಸ್ಥಳದ ಕೊರತೆ ಇದೆ ಹೀಗಾಗಿ ನಿರ್ಮಾಣ ಹಂತದಲ್ಲಿರುವ ಹೂಸ ಕಟ್ಟಡ ಆದಷ್ಟು ಬೇಗ ನಿರ್ಮಾಣವಾದಲ್ಲಿ ಸ್ಥಳದ ಕೊರತೆಯನ್ನು ನೀಗಿಸಬಹುದು ಮತ್ತು ಹೆಚ್ಚಿನ ಸೌಲಬ್ಯಗಳು ದೊರಕುವ ಸಾದ್ಯತೆ ಇದೆ. ಈ ನಿಟ್ಟಿನಲ್ಲಿ ಕಟ್ಟಡ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಮತ್ತು ಸರಕಾರಿ ವ್ಯವಸ್ಥೆಯಲ್ಲಿ ಲೇಡಿಗೋಷನ್ ಆಸ್ಪತ್ರೆಯು ಉತ್ತಮ ಸೌಲಬ್ಯವು ಹೊಂದಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಚಿಕಿತ್ಸಾಸೌಲಬ್ಯಗಳನ್ನು ಅತ್ಯಾದುನಿಕರಣಗೊಳಿಸಿ ಇತರ ಆಸ್ಪತ್ರೆಗಳಿಗೆ ಮಾದರಿಯಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

Lady_Goschen_hospital_visit_02Lady_Goschen_hospital_visit_03Lady_Goschen_hospital_visit_04