Home » Website » News from jrlobo's Office » ಸಚಿವ ಮಹಾದೇವ ಪ್ರಸಾದ್ ಸಜ್ಜನ ರಾಜಕಾರಣಿ: ಜೆ.ಆರ್.ಲೋಬೊ
JRLobo
Photography of JRLobo in office

ಸಚಿವ ಮಹಾದೇವ ಪ್ರಸಾದ್ ಸಜ್ಜನ ರಾಜಕಾರಣಿ: ಜೆ.ಆರ್.ಲೋಬೊ

ಮಂಗಳೂರು: ಅಖಾಲಿಕವಾಗಿ ನಿಧನರಾದ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಸಜ್ಜನರಾಜಕಾರಣಿ ಮತ್ತು ಸದಾ ತಾಳ್ಮೆಯಿಂದ ಇದ್ದವರು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ. ಅವರು ಸಂತಾಪ ಸೂಚಕ ಸಂದೇಶ ನೀಡಿ ಅವರು ಎಂಥ ಒತ್ತಡದಲ್ಲೂ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಸದನದಲ್ಲೂ ಅವರು ವಿನಯತೆಯನ್ನು ಕಾಪಾಡುತ್ತಿದ್ದರು.ಅವರು ಕಿರಿಯರಿಗೆ ಮಾರ್ಗದರ್ಶಕ ಎಂದರಲ್ಲದೆ ಅವರು ಅನುಕರಣೆಗೆ ಯೋಗ್ಯರು ಎಂದರು. ಅವರ ನಿಧನದಿಂದ ಸಹಕಾರಿ ಕ್ಷೇತ್ರ ನಿಷ್ಠಾವಂತರನ್ನು ಕಳೆದುಕೊಂಡಂತಾಗಿದೆ. ಅವರ ಅಗಲುವಿಕೆಯನ್ನು ಅವರ ಮನೆಯರಿಗೆ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.