ಮೈದಾನದ ಅಭಿವೃಧ್ಧಿ ಕ್ರೀಡೆಯ ಒಂದು ಭಾಗ. ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ವಯಸ್ಕರಿಗೆ ಇಂದಿನ ಕಾಲದಲ್ಲಿ ತಮ್ಮ ಆರೋಗ್ಯ ಕ್ಷಮತೆಯನ್ನು ಕಾಪಾಡಿಕೊಳ್ಳಲು, ತಮ್ಮ ದಿನನಿತ್ಯದ ವ್ಯಾಯಮಗಳನ್ನು ಮಾಡಿಕೊಳ್ಳಲು ಹಾಗೂ ಕ್ರೀಡಾಕೂಟಗಳನ್ನು ಸಂಘಟಿಸಲು ಮೈದಾನವನ್ನು ನೆಚ್ಚಿಕೊಂಡಿರುತ್ತಾರೆ. ಆದುದರಿಂದ ಗ್ರಾಮೀಣ ಮಟ್ಟದಲ್ಲಿರುವ ಈ ಒಂದು ಮೈದಾನವನ್ನು ಅಭಿವೃಧ್ಧಿಗೊಳಿಸಲು ರಾಜ್ಯ ಸರಕಾರ ಮತ್ತು ಮಂಗಳೂರು ಮಹಾ ನಗರ ಪಾಲಿಕೆಯು ಕ್ರಮ ಕೈಗೊಂಡಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ. ಜೆ.ಆರ್ ಲೋಬೋರವರು ದಿನಾಂಕ 11.10.2015 ರಂದು ಕಂಕನಾಡಿ ಬಿ. ವಾರ್ಡಿನಲ್ಲಿರುವ ಕೆ.ಹೆಚ್.ಬಿ. ಕಾಲನಿ ಬಳಿರುವ ಸಾರ್ವಜನಿಕ ಮೈದಾನದ ಅಭಿವೃಧ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈಗಾಗಲೇ Sಈಅ ಅನುದಾನದಿಂದ ಸುಮಾರು 40ಲಕ್ಷ ಈ ಮೈದಾನದ ಅಭಿವೃಧ್ಧಿಗೆ ಮಂಜೂರಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃಧ್ಧಿಗೆ ಹೆಚ್ಚಿನ ಅನುದಾನ ಒದಗಿಸಲು ನಾವು ಪ್ರಯತ್ನಿಸುತ್ತೇವೆ. ಕ್ರೀಡೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಮ್ಮೆಕೆರೆ ಬಳಿ ಈಜುಕೊಳವನ್ನು ನಿರ್ಮಿಸಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಮೇಯರ್ ಮಹಾಬಲ ಮಾರ್ಲ, ಶಶಿಧರ್ ಹೆಗ್ಗಡೆ ಸಂಧೋರ್ಬೊಚಿತವಾಗಿ ಮಾತನಾಡಿದರು. ಸ್ಥಳೀಯ ಕಾರ್ಪೋರೇಟರ್ ಪ್ರವೀಣ್ಚಂದ್ರ ಆಳ್ವ ಪ್ರಾಸ್ತವಿಕವಾಗಿ ಮಾತನಾಡುತ್ತ ಗ್ರಾಮೀಣ ಪ್ರದೇಶವಾದ ಕಂಕನಾಡಿ ಬಿ. ವಾರ್ಡ್ ಅನೇಕ ವರ್ಷಗಳಿಂದ ಮೈದಾನದ ಕೊರತೆಯಿಂದ ಕೂಡಿತ್ತು. ಈ ಪ್ರದೇಶದ ಜನರಿಗೆ ವಿಶೇಷವಾಗಿ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೈದಾನವು ಅತೀ ಅಗತ್ಯವಾಗಿದೆ. ಇದನ್ನು ನಿರ್ಮಿಸುವ ಕಾಲ ಈಗ ಕೂಡಿ ಬಂದಿದೆ. ಇದನ್ನು ಪೂರ್ಣಗೊಳಿಸಲು ನಾನು ಎಲ್ಲರ ಸಹಕಾರ ಬಯಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪಾಲಿಕೆಯ ಸಾಯಿ ಸಮಿತಿ ಅಧ್ಯಕ್ಷ ದೀಪಕ್ ಪೂಜಾರಿ, ಕಾರ್ಪೋರೇಟರ್ ಅಶೋಕ್ .ಡಿ.ಕೆ, ಕಾಂಗ್ರೇಸ್ ಮುಖಂಡರಾದ ಉಮೇಶ್ ಚಂದ್ರ, ಸೇಸಮ್ಮ, ಪ್ರಭಾಕರ್ ಶ್ರೀಯಾನ್, ಭರತ್ರಾಂ, ಕೇಶವ ಅಂಗಡಿಮಾರ್ , ಹಮೀದ್, ರಾಮಚಂದ್ರ ಆಳ್ವ, ಗೋಪಾಲ್ ಶೆಟ್ಟಿ, ರತ್ನಾಕರ್ ರಾವ್, ಕೃತೀನ್ ಕುಮಾರ್, ಶಶಿಧರ್ ಕೊಟ್ಟಾರಿ, ಮೊದಲಾದವರು ಉಪಸ್ಥಿತರಿದ್ದರು.
