Home » Website » News from jrlobo's Office » ಸ್ವಯಂಪ್ರೇರಿತರಾಗಿ ಮಿಥುನ್ ರೈ ಪರ ಪ್ರಚಾರದಲ್ಲಿ ಯುವಕರು
ಸ್ವಯಂಪ್ರೇರಿತರಾಗಿ ಮಿಥುನ್ ರೈ ಪರ ಪ್ರಚಾರದಲ್ಲಿ ಯುವಕರು
Image from post regarding ಸ್ವಯಂಪ್ರೇರಿತರಾಗಿ ಮಿಥುನ್ ರೈ ಪರ ಪ್ರಚಾರದಲ್ಲಿ ಯುವಕರು

ಸ್ವಯಂಪ್ರೇರಿತರಾಗಿ ಮಿಥುನ್ ರೈ ಪರ ಪ್ರಚಾರದಲ್ಲಿ ಯುವಕರು

ಮಂಗಳೂರು 7 ಏಪ್ರಿಲ್ 2019: ಕುಳೂರು ಪ್ರದೇಶದ ನೂರಕ್ಕೂ ಹೆಚ್ಚು ಯುವಕರು ಸ್ವಯಂ ಪ್ರೇರಿತರಾಗಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಕುಳೂರು ನಿವಾಸಿ ಅನಿಲ್ ಡೆವಿಡ್ ಅವರ ನೇತೃತ್ವದಲ್ಲಿ 120 ಮಂದಿ ಯುವಕರು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಭಾವಚಿತ್ರ ಮತ್ತು ಚುನಾವಣಾ ಚಿಣ್ನೆ ಇರುವ ಟೀ ಶರ್ಟ್ ಮತ್ತು ಟೊಪ್ಪಿಗಳನ್ನು ಧರಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಮಿಥುನ್ ರೈ ಅವರಂತಹ ಯುವಕ, ವಿದ್ಯಾವಂತ ನಮ್ಮ ಜಿಲ್ಲೆಗೆ ಸಂಸದನಾಗಿ ಆಯ್ಕೆ ಆಗಬೇಕೆಂದು ತಾವೇ ಸ್ವಂತ ಹಣ ಖರ್ಚು ಮಾಡಿ ಮನೆ ಮನೆಗೆ ತೆರಳಿ ಮಿಥುನ್ ರೈ ಪ್ರ ಪ್ರಚಾರ ನಡೆಸುತ್ತಿದ್ದೇವೆ ಎಂದು ಪ್ರಚಾರ ತಂಡದ ಸುರೇಶ್ ತಿಳಿಸಿದ್ದಾರೆ.

ಒಟ್ಟು ನಾಲ್ಕು ತಂಡಗಳನ್ನು ಮಾಡಿ ಮಿಥುನ್ ರೈ ಅವರ ಪರವಾಗಿ ಮತಯಾಚನೆ ಮಾಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಕಾರ್ಯಕರ್ತರನ್ನು ಸಂಘಟಿಸಲು ರಾಜಕೀಯ ಪಕ್ಷಗಳು ಹೆಣಗಾಡುವ ಇಂದಿನ ದಿನಗಳಲ್ಲಿ ಕುಳೂರು ಪ್ರದೇಶದ ಯುವಕರ ಕಾರ್ ಶ್ಲಾಘನೀಯವಾಗಿದೆ.

ಸ್ವಯಂ ಆಸಕ್ತಿಯಿಂದ ಬೆಂಬಲ ನೀಡುತ್ತಿರುವ ಕುಳೂರಿನ ಯುವಕರ ತಂಡಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕೃತಜ್ಞತೆ ಸಲ್ಲಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಃ ಸುರೇಶ್ 9343947777