Home » Website » News from jrlobo's Office » ಹೊಯಿಗೆ ಬಜಾರ್, ಸುಭಾಶ್‍ನಗರ, ಮರೋಳಿ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಪ್ರಚಾರ
ಹೊಯಿಗೆ ಬಜಾರ್, ಸುಭಾಶ್‍ನಗರ, ಮರೋಳಿ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಪ್ರಚಾರ
Image from post regarding ಹೊಯಿಗೆ ಬಜಾರ್, ಸುಭಾಶ್‍ನಗರ, ಮರೋಳಿ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಪ್ರಚಾರ

ಹೊಯಿಗೆ ಬಜಾರ್, ಸುಭಾಶ್‍ನಗರ, ಮರೋಳಿ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಪ್ರಚಾರ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ.ಜೆ.ಆರ್.ಲೋಬೊ ರವರು ಇಂದು ದಿನಾಂಕ: 05.05.2018ರಂದು ಬೆಳಗ್ಗೆ, ನಗರದ ಹೊಯಿಗೆ ಬಜಾರ್, ಸುಭಾಶ್‍ನಗರ ಮತ್ತು ಮರೋಳಿ ಪರಿಸರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಅಭಿವೃದ್ಧಿ ಕಡೆ ಜನರ ಒಲವು ಬಹಳವಾಗಿ ಕಂಡುಬರುತ್ತಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ.ಆರ್.ಲೋಬೊ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಳೆದ 20 ವರ್ಷಗಳಿಂದ ಸಾಧ್ಯವಾಗದ ರಸ್ತೆ ಅಭಿವೃದ್ಧಿಗಳು, ಚರಂಡಿ, ಪೂಟ್‍ಪಾತ್ ನಿರ್ಮಾಣ ಕಾಮಗಾರಿಗಳು ಪ್ರಸಕ್ತ ಆರಂಭವಾಗಿದೆ. ವಾಹನಗಳ ಸಂಖ್ಯೆಗಳು ಹೆಚ್ಚಳವಾದಂತೆ, ಮುಖ್ಯ ರಸ್ತೆಗಳ ಅಗಲೀಕರಣ ಕಾರ್ಯ ಅನೇಕ ಕಡೆ ಆಗಿದೆ. ನಂತೂರು ವೃತ್ತದಿಂದ ನಂದಿಗುಡ್ಡೆ ಕೋಟಿ ಚೆನ್ನಯ್ಯ ವೃತ್ತದ ವರೆಗೆ ರಸ್ತೆ ಅಗಲೀಕರಣ, ರಸ್ತೆ ವಿಭಜಕ, ಹೊಸ ವಿದ್ಯುತ್ ಲೈಟು, ಪುಟ್‍ಪಾತ್ ನಿರ್ಮಾಣ ಕಾರ್ಯ ವೇಗವಾಗಿ ಆಗುತ್ತಿದ್ದು, ಇದೊಂದು ಮಂಗಳೂರಿನ ಮಾದರಿ ರಸ್ತೆ ಎಂದು ಹೇಳಬಹುದು. ಅನೇಕ ಯೋಜನೆಗಳು ನಾನಾ ಹಂತದಲ್ಲಿದ್ದು ಅದು ಮುಂದಿನ ದಿನಗಳಲ್ಲಿ ಅನುಷ್ಟಾನಕ್ಕೆ ಬರುತ್ತದೆ. ಮಂಗಳೂರಿನ ಜನತೆ ಅಭಿವೃದ್ಧಿಗೆ ತುಂಬಾ ಸಹಕಾರ ಕೊಡುತ್ತಿದ್ದಾರೆ. ಖಂಡಿತವಾಗಿಯೂ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಲ್ಲಿ ಸಂಶಯವಿಲ್ಲಾ ಎಂದರು. ಅಭ್ಯರ್ಥಿಯೊಂದಿಗೆ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಿಂದ ಅಬ್ದುಲ್ ಸಲಾಮ್, ವಿಶ್ವಾಸ್ ಕುಮಾರ್ ದಾಸ್, ಕಾರ್ಪೋರೇಟರ್ ಲತೀಪ್ ಕಂದಕ್, ಕವಿತಾ ವಾಸು, ಕೇಶವ ಮರೋಳಿ, ಸ್ಟೀಪನ್ ಮರೋಳಿ, ಪಕ್ಷದ ಪ್ರಮುಖರಾದ ಸದಾಶಿವ ಅಮೀನ್, ಸುರೇಶ್ ಶೆಟ್ಟಿ, ಟಿ.ಕೆ.ಸುಧೀರ್, ಅರುಣ್ ಕುವೆಲ್ಲೊ, ಲೋಕೇಶ್ ಹೆಗ್ಡೆ, ಗಂಗಾಧರ ಪೂಜಾರಿ, ನೆಲ್ಸನ್ ಮೊಂತೆರೊ, ಹೊನ್ನಯ್ಯ, ಸುಧಾಕರ ಶೈಣೈ ರಮಾನಂದ ಪೂಜಾರಿ, ಬಿ.ಎಮ್. ಭಾರತಿ, ದುರ್ಗಾಪ್ರಸಾದ್, ದೇವೇಂದ್ರ, ಲೆಸ್ಲಿ ಡಿ’ಕ್ರೂಸ್, ರಾಕೇಶ್, ಜಾಯ್‍ಕ್ರಿಸ್ತ್, ಗಾಡ್ವಿನ್, ರಾಹುಲ್ ಮುಂತಾದವರು ಉಪಸ್ಥಿತರಿದ್ದರು.

ಹೊಯಿಗೆ ಬಜಾರ್, ಸುಭಾಶ್‍ನಗರ, ಮರೋಳಿ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಪ್ರಚಾರ