Home » Website » News from jrlobo's Office » 2 ಕೋಟಿ ರೂಪಾಯಿ ವೆಚ್ಚದಲ್ಲಿ ಕುದ್ಮಲ್ ರಂಗರಾವ್ ಭವನ: ಶಾಸಕ ಜೆ.ಆರ್.ಲೋಬೊ
2 ಕೋಟಿ ರೂಪಾಯಿ ವೆಚ್ಚದಲ್ಲಿ ಕುದ್ಮಲ್ ರಂಗರಾವ್ ಭವನ: ಶಾಸಕ ಜೆ.ಆರ್.ಲೋಬೊ
Image from post regarding 2 ಕೋಟಿ ರೂಪಾಯಿ ವೆಚ್ಚದಲ್ಲಿ ಕುದ್ಮಲ್ ರಂಗರಾವ್ ಭವನ: ಶಾಸಕ ಜೆ.ಆರ್.ಲೋಬೊ

2 ಕೋಟಿ ರೂಪಾಯಿ ವೆಚ್ಚದಲ್ಲಿ ಕುದ್ಮಲ್ ರಂಗರಾವ್ ಭವನ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ನಗರದ ಬಾಬು ಗುಡ್ಡೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕುದ್ಮಲ್ ರಂಗರಾವ್ ಸಭಾ ಭವನವನ್ನು ವೀಕ್ಷಿಸಿದ ಶಾಸಕ ಜೆ.ಆರ್.ಲೋಬೊ ಅವರು ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸುವಂತೆ ಸಲಹೆ ಮಾಡಿದರು. ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯನ್ನು ಶಾಸಕ ಜೆ.ಆರ್.ಲೋಬೊ ಅವರು ಇದು ಪರಿಶೀಲಿಸಿದರು.
ಮೂರು ಅಂತದ ಈ ಭವನದಲ್ಲಿ ಕೆಳಗೆ ಕಾರ್ ಪಾರ್ಕಿಂಗ್, ಎರಡನೆ ಮಾಳಿಗೆಯಲ್ಲಿ ಸಭಾಭವನ ಮೂರನೇ ಮಾಳಿಗೆಯಲ್ಲಿ ಭೋಜನಕ್ಕೆ ವ್ಯವಸ್ಥೆ ಇದೆ. ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಮುಗಿಸುವಂತೆಯೂ ಇನ್ನೂ ಹೆಚ್ಚಿನ ಅನುದಾನ ಬೇಕಾಗಿದ್ದರೆ ಕೊಡಿಸುವ ಭರವಸೆಯನ್ನು ನೀಡಿದರು.

ಇದು ಮುಗಿದ ಬಳಿಕ ಲೋಕಾರ್ಪಣೆ ಮಾಡಿ ಸಾರ್ವಜನಿಕರಿಗೆ ಬಿಟ್ಟುಕೊಡಲಾಗುವುದು. ಕಾಮಗಾರಿಯಲ್ಲಿ ಲೋಪ ಕಂಡು ಬರದಂತೆ ನಿಗಾ ವಹಿಸುವಂತೆಯೂ ಲೋಬೊ ತಾಕೀತು ಮಾಡಿದರು. ಈ ಸಂರದರ್ಭದಲ್ಲಿ ಕಾರ್ಪೊರೇಟರ್ ಕು.ಅಪ್ಪಿ, ಶೈಲಜಾ, ಕೆ.ಎಸ್.ಆರ್.ಟಿಸಿ ನಿರ್ದೇಶಕ್ ಟಿ.ಕೆ.ಸುಧೀರ್, ವಿಜಯಲಕ್ಷ್ಮೀ, ಗುತ್ತಿಗೆದಾರರಾದ ಅರುಣ್ ಕೊಯೆಲೋ ಮುಂತಾದವರಿದ್ದರು.

2 ಕೋಟಿ ರೂಪಾಯಿ ವೆಚ್ಚದಲ್ಲಿ ಕುದ್ಮಲ್ ರಂಗರಾವ್ ಭವನ: ಶಾಸಕ ಜೆ.ಆರ್.ಲೋಬೊ