ಮಂಗಳೂರು,ಅ.19: ದೇರಳಕಟ್ಟೆಯಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಓಒಒS ಮತ್ತು ಓಖಿSಇ ವಿಶೇಷ ಸನಿವಾಸ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರದ ಶ್ರೀ ಜೆ.ಆರ್ ಲೋಬೊರವರು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿದರು. ನಂತರ ಮಾತನಾಡಿದ ಶಾಸಕರು ಇಂತಹ ತರಭೇತಿಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶದ ಸದುಪಯೋಗವನ್ನು ಪಡೆದು ಉತ್ತಮ ವಿದ್ಯಾಭ್ಯಾಸದೊಡನೆಈ ದೇಶದ ಆದರ್ಶ ನಾಗರಿಕರಾಗಬೇಕೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ತಾಲೂಕಿನ ವಿವಿದ ಸರಕಾರಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.

Image from Post Regarding NMMS ಮತ್ತು NTSE ಸನಿವಾಸ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರದ ಶ್ರೀ ಜೆ.ಆರ್ ಲೋಬೊ