ಮಂಗಳೂರು ಮಹಾನಗರ ಪಾಲಿಕೆಯ ಪದವು ಗ್ರಾಮ ವ್ಯಾಪ್ತಿಯಲ್ಲಿರುವ ಶ್ರೀಮತಿ ಅಮಿತಾ, ಶ್ರೀಮತಿ ಕಮಲಾಕ್ಷಿ, ಶ್ರೀಮತಿ ಜಲಜಾಕ್ಷಿ, ಶ್ರೀಮತಿ ಶ್ಯಾಮಲಾ ಮತ್ತು ಶ್ರೀಮತಿ ಯಶವಂತಿ ರೈ ಯವರಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಡಿಯಲ್ಲಿ ತಲಾ 20,000 ದಂತೆ ಸಹಾಯಧನವನ್ನು ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಬಿಕರ್ನ ಕಟ್ಟೆಯಲ್ಲಿರುವ ಗ್ರಾಮಲೆಕ್ಕಿಗ ಕಛೇರಿಯಲ್ಲಿ ವಿತರಿಸಿದರು. ಅವರೊಂದಿಗೆ ಗ್ರಾಮಲೆಕ್ಕಿಗ ರವೀಂದ್ರ ಶೆಟ್ಟಿ ಮಾಜಿ ಮೇಯರ್ ಆಬ್ದುಲ್ ಅಜೀಜ್, ಕಾಪೆರ್Çೀರೇಟರ್ ಅಖಿಲಾ ಆಳ್ವ ಹಾಗೂ ಕಾಂಗ್ರೆಸ್ ಮುಖಂಡರಾದ ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ಕೃತಿನ್ ಕುಮಾರ್, ಯಶವಂತ ಪ್ರಭು, ಮೋಹನ್ ಮೆಂಡನ್, ಮೊದಲಾದವರು ಉಪಸ್ಥಿತರಿದ್ದರು.

Image from Post Regarding ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಡಿಯಲ್ಲಿ ಸಹಾಯಧನ ವಿತರಣೆ