Home » Website » News from jrlobo's Office » ಅತ್ತಾವರ ವಾರ್ಡಿನ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.
ಅತ್ತಾವರ ವಾರ್ಡಿನ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.
Image from post regarding ಅತ್ತಾವರ ವಾರ್ಡಿನ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ಅತ್ತಾವರ ವಾರ್ಡಿನ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ಲೋಕಸಭಾ ಚುನಾವಣೆಯ ಈ ಸಂಧರ್ಭದಲ್ಲಿ ನಿನ್ನ ತಾ:3-4-19ರಂದು ಚುನಾವಣೆ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಂಗಳೂರಿನ ಅತ್ತಾವರ ವಾರ್ಡಿನ ಹಲವು ಬಿಜೆಪಿ ಕಾರ್ಯಕರ್ತರು ಶ್ರೀ ಅಕ್ಷಯ್ ಕುಮಾರ್‍ರವರ ನೇತೃತ್ವದಲ್ಲಿ ದಕ್ಷಿಣ ಬ್ಲಾಕ್ ಅಧ್ಯಕ್ಷ ಶ್ರೀ ಅಬ್ದುಲ್ ಸಲೀಂರವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು . ಅತ್ತಾವರ ಬಾಬುಗುಡ್ಡೆ ಪ್ರದೇಶದ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಹಲವರು ಬಿಜೆಪಿ ದ್ವಂದ್ವ ನೀತಿ ಧೋರಣೆಗಳಿಂದ ಅಸಮಾಧಾನಗೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಶ್ರೀ ಅಕ್ಬರ್ ಆಲೀಂ, ಮಾಜಿ ಮೂಡಾ ಅಧ್ಯಕ್ಷ ತೇಜೋಮಯ, ಮಾಜಿ ಮೇಯರ್ ಮಹಾಬಲ ಮಾರ್ಲ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಕೆ.ಸುಧೀರ್, ಯುವ ಕಾಂಗ್ರೆಸ್ ಅಧ್ಯಕ್ಷ ಮೆರಿಲ್ ರೇಗೋ, ರಾಜ್ಯ ಕಾರ್ಯದರ್ಶಿ ಸುಹೈಲ್ ಕಂದಕ್, ರಾಜ್ಯ ಎಸ್.ಸಿ/ಎಸ್.ಟಿ ಘಟಕ ಸಹಸಂಚಾಲಕ ಹೊನ್ನಯ್ಯ, ವಾರ್ಡ ಅಧ್ಯಕ್ಷ ಜಯಂತ್ ಪೂಜಾರಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ರಮಾನಂದ ಪೂಜಾರಿ, ಮಾಜಿ ಕಾರ್ಪೋರೇಟರ್ ಭಾಸ್ಕರ್ ರಾವ್ ಮೊದಲಾದವರು ಉಪಸ್ಥಿತರಿದ್ದರು.