Home » Website » News from jrlobo's Office » ಉಚಿತ ಆರೋಗ್ಯ ತಪಾಸಣೆ ಮತ್ತು ಸೊಳ್ಳೆಪರದೆ ವಿತರಣೆ
ಉಚಿತ ಆರೋಗ್ಯ ತಪಾಸಣೆ ಮತ್ತು ಸೊಳ್ಳೆಪರದೆ ವಿತರಣೆ
Image from post regarding ಉಚಿತ ಆರೋಗ್ಯ ತಪಾಸಣೆ ಮತ್ತು ಸೊಳ್ಳೆಪರದೆ ವಿತರಣೆ

ಉಚಿತ ಆರೋಗ್ಯ ತಪಾಸಣೆ ಮತ್ತು ಸೊಳ್ಳೆಪರದೆ ವಿತರಣೆ

ಮಂಗಳೂರು: ಮರೋಳಿ ವಾರ್ಡ್ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಪಡೀಲ್ ಹಾಗೂ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ವೈದ್ಯರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಸೊಳ್ಳೆಪರದೆ ವಿತರಿಸುವ ಕಾರ್ಯಕ್ರಮವನ್ನು ಶಾಸಕ ಜೆ.ಆರ್.ಲೋಬೊ ಅವರು ದೀಪಬೆಳಗಿಸಿ ಉದ್ಘಾಟಿಸಿದರು.

ಬಿಪಿಎಲ್ ಕಾರ್ಡ್ ದಾರರಿಗೆ ಶಾಸಕರು ಸೊಳ್ಳೆಪರದೆಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನರು ಇದರ ಸಹಕಾರ ಪಡೆದುಕೊಂಡು ಆರೋಗ್ಯ ರಕ್ಷಣೆಯನ್ನು ಕಾಪಾಡಿಕೊಳ್ಳಲು ಸಲಹೆ ಮಾಡಿದರು.

ಕಾರ್ಪೊರೇಟರ್ ಕೇಶವ ಮರೋಳಿ, ನವೀನ್ ಡಿಸೋಜ, ಸ್ಟಿಪನ್ ಮರೋಳಿ, ಚರ್ಚನ್ ಧರ್ಮಗುರುಗಳಾದ ಸಬಾದ್ ಕ್ರಾಸ್ತಾ , ಡಾ. ಪ್ರವೀಣ್, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಗಣ್ಯರಾದ ತೇಜಾಕ್ಷ ಸುವರ್ಣ, ಲಕ್ಷೀಶ್ ಬಜ್ಜೋಡಿ, ಜೋಸೆಫ್, ಜೋನ್ ಫೆರ್ನಾಂಡಿಸ್, ರಮೇಶ್ ಬಜ್ಜೋಡಿ, ಬೂತ್ ಅಧ್ಯಕ್ಷರಾದ ಫೆಟ್ರಿಕ್ ಲೋಬೊ, ಜೋಯ್ ಕ್ರಾಸ್ತಾ, ವಾರ್ಡ್ ಅಧ್ಯಕ್ಷ ಗಂಗಾಧರ್ ಪೂಜಾರಿ ಉಪಸ್ಥಿತರಿದ್ದರು.