Home » Website » News from jrlobo's Office » ಉಪ್ಪಿನಂಗಡಿ ಪರಿಸರದಲ್ಲಿ ಮಿಥುನ್ ಎಂ ರೈ ಅಬ್ಬರದ ಪ್ರಚಾರ
ಉಪ್ಪಿನಂಗಡಿ ಪರಿಸರದಲ್ಲಿ ಮಿಥುನ್ ಎಂ ರೈ ಅಬ್ಬರದ ಪ್ರಚಾರ
Image from post regarding ಉಪ್ಪಿನಂಗಡಿ ಪರಿಸರದಲ್ಲಿ ಮಿಥುನ್ ಎಂ ರೈ ಅಬ್ಬರದ ಪ್ರಚಾರ

ಉಪ್ಪಿನಂಗಡಿ ಪರಿಸರದಲ್ಲಿ ಮಿಥುನ್ ಎಂ ರೈ ಅಬ್ಬರದ ಪ್ರಚಾರ

ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಶ್ರೀ ಎಂ.ಮಿಥುನ್‍ರೈ ಇಂದು ದಿನಾಂಕ 16.04.2019 ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವರ ದರ್ಶನ ಪಡೆದು ಬಳಿಕ ಉಪ್ಪಿನಂಗಡಿ ಪೇಟೆಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು. ಅಲ್ಲದೆ ಬಜತ್ತೂರು, ಪೆರ್ನೆ, ಮಂಜಲ್ಪಡ್ಪು, ಕಂಬಳಬೆಟ್ಟು, ಪುಣಚ, ಪಾಣಾಜೆ ಪರಿಸರದಲ್ಲೂ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ್ ರೈ ಹಾಗೂ ಪಕ್ಷದ ಮುಖಂಡರಾದ ದೇವದಾಸ್ ರೈ, ಯು.ಕೆ.ಇಬ್ರಾಹಿಂ, ಮಾಣಿಕ್ಯ ರಾಜ್, ಗೀತಾ ದಾಸರಮೂಲೆ, ನಸೀರ್ ಮಠ, ಅಶ್ರಫ್ ಬಸ್ತಿಕಾರ್, ಯು.ಟಿ.ತೌಶಿಫ್ ಮತ್ತಿತರರು ಉಪಸ್ಥಿತರಿದ್ದರು.