Home » Website » News from jrlobo's Office » ಉರ್ವ ಕಲ್ಲಾಪು ರಸ್ತೆ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ.
ಉರ್ವ ಕಲ್ಲಾಪು ರಸ್ತೆ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ.
Image from post regarding ಉರ್ವ ಕಲ್ಲಾಪು ರಸ್ತೆ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ.

ಉರ್ವ ಕಲ್ಲಾಪು ರಸ್ತೆ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ.

ನಗರದ ಉರ್ವ ಹೊಯಿಗೆಬೈಲ್ ಬಳಿ ಕಲ್ಲಾಪು ರಸ್ತೆ ಮತ್ತು ಸೇತುವೆ ಕಾಮಗಾರಿಗೆ ತಾ 11.03.2018 ರಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊರವರು ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರಾಜ್ಯದ ಮುಖ್ಯಮಂತ್ರಿಯವರು ತಮ್ಮ ವಿಶೇಷ ಅನುದಾನದ ನಿಧಿಯಿಂದ ರೂ. 5 ಕೋಟಿ ನೀಡಿದ್ದಾರೆ. ಅದರಲ್ಲಿ ರೂ. 35 ಲಕ್ಷ ಅನುದಾನದಿಂದ ಇಲ್ಲಿನ ಕಲ್ಲಾಪು ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಿಸಲಿದ್ದೇವೆ. ಇಲ್ಲಿನ ಬಡಾವಣೆಯಲ್ಲಿ ವಾಸಿಸುತ್ತಿರುವ ಜನರು ಬಹಳ ವರ್ಷಗಳಿಂದ ಸರಿಯಾದ ರಸ್ತೆಯಿಲ್ಲದೇ ಬಹಳಷ್ಟು ತೊಂದರೆಯನನ್ನು ಅನುಭವಿಸಿದ್ದಾರೆ. ಮುಂದಿನ 3 ತಿಂಗಳೊಳಗೆ ಕಾಮಗಾರಿಯನ್ನು ಪೂರ್ತಿಗೊಳಿಸಲಿದ್ದೇವೆ. ಸುಮಾರು 60 ಮೀಟರ್ ಉದ್ದದ ರಸ್ತೆಯು ಇದಾಗಿದ್ದು, ಇದರ ಅಗಲ ಮೂರುವರೆ ಮೀಟರ್ ಆಗಿರುತ್ತದೆ. ಅದಲ್ಲದೇ ಸೇತುವೆಯು 20 ಫೀಟ್ ಉದ್ದವಾಗಿದ್ದು, ಇದರ ಅಗಲ 4 ಮೀಟರ್ ಇದೆ. ಈ ಕಾಮಗಾರಿಯು ಪೂರ್ಣಗೊಂಡಾಗ ಇಲ್ಲಿನ ಜನರಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದರು.

ನೂತನ ಮೇಯರ್ ಶ್ರೀ.ಭಾಸ್ಕರ್.ಕೆ ಮಾತನಾಡಿ, ನಗರದ ಎಲ್ಲಾ ಪ್ರದೇಶಗಳಿಗೆ ರಸ್ತೆ ಸಂಪರ್ಕ ಅತೀ ಅಗತ್ಯ. ಜನರ ಬೇಡಿಕೆಗಳಿಗೆ ಖಂಡಿತವಾಗಿಯೂ ಪಾಲಿಕೆಯು ಸ್ಪಂದಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೋರೇಟರ್ ಹಾಗೂ ಪಾಲಿಕೆಯ ಹಣಕಾಸು ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ , ಮಾಜಿ ಮೂಡ ಅಧ್ಯಕ್ಷ ಡಾ.ಬಿ.ಜಿ.ಸುವರ್ಣ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಕಾಂಗ್ರೆಸ್ ಮುಖಂಡರುಗಳಾದ ನೀರಜ್ ಪಾಲ್, ಉಮೇಶ್ ದಂಡೇಕೇರಿ, ವಾರ್ಡ್ ಅಧ್ಯಕ್ಷರಾದ ಗಣೇಶ್, ಎ.ಪಿ.ಎಮ್.ಸಿ ಸದಸ್ಯ ಭರತೇಶ್ ಅಮಿನ್, ಚೇತನ್ ಉರ್ವ, ದಿಲಿಪ್, ಸುಂದರ್, ಪಾಲಿಕೆಯ ಇಂಜಿನಿಯರ್ ನಿತ್ಯಾನಂದ, ಗುತ್ತಿಗೆದಾರ ಆಸೀಫ್ ಮೊದಲಾದವರು ಉಪಸ್ಥಿತರಿದ್ದರು.