Home » Website » News from jrlobo's Office » ಏಪ್ರಿಲ್ 23 ರಂದು ‘ಚಿಣ್ಣರ ಚಿಲಿಪಿಲಿ’ ಶಿಬಿರ
JRLobo
Photography of JRLobo in office

ಏಪ್ರಿಲ್ 23 ರಂದು ‘ಚಿಣ್ಣರ ಚಿಲಿಪಿಲಿ’ ಶಿಬಿರ

ಮಂಗಳೂರು: ಬೊಕ್ಕಪಟ್ಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏಪ್ರಿಲ್ 23 ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ‘ಚಿಣ್ಣರ ಚಿಲಿಪಿಲಿ’ ಉಚಿತ ಬಾಲ ಪ್ರತಿಭಾ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರವನ್ನು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸುವರು. ಇದೇ ಸಮಯದಲ್ಲಿ ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಆಧಾರ ಕಾರ್ಡ್ ನೋಂದಣಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯುವಂತೆ ಕೋರಲಾಗಿದೆ.