Home » Website » News from jrlobo's Office » ಕಣ್ಣೂರು- ಕನ್ನಗುಡ್ಡೆ ರಸ್ತೆ ನಿರ್ಮಣಕ್ಕೆ 10 ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ
ಕಣ್ಣೂರು- ಕನ್ನಗುಡ್ಡೆ ರಸ್ತೆ ನಿರ್ಮಣಕ್ಕೆ 10 ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ
Image from post regarding ಕಣ್ಣೂರು- ಕನ್ನಗುಡ್ಡೆ ರಸ್ತೆ ನಿರ್ಮಣಕ್ಕೆ 10 ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ

ಕಣ್ಣೂರು- ಕನ್ನಗುಡ್ಡೆ ರಸ್ತೆ ನಿರ್ಮಣಕ್ಕೆ 10 ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಕಣ್ಣೂರು- ಕನ್ನಗುಡ್ಡ ರಸ್ತೆ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಇಲ್ಲಿ 7.5 ಮೀಟರ್ ಅಗಲದ ರಸ್ತೆ ಮಾಡಲಾಗುವುದು. ಸುಮಾರು 5 ಕಿ.ಮೀ ಉದ್ದಕ್ಕೆ ಈ ರಸ್ತೆ ಬರುತ್ತದೆ ಎಂದರು.

ಶುಕ್ರವಾರ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಬೇಕು ಎಂದು ಹೇಳಿದ ಶಾಸಕ ಜೆ.ಆರ್.ಲೋಬೊ ಅವರು ಜಂಟಿ ನಿರ್ದೇಶಕರು, ಟಿಪಿಒ ಮತ್ತು ಸರ್ವೇಯರಗಳು ಜಂಟಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಇದು ವೇಗವಾಗುವುದಿಲ್ಲ ಎಂದರು.

ಶಾಸಕ ಜೆ.ಆರ್.ಲೋಬೊ ಅವರು ಕಂಕನಾಡಿ ರೈಲ್ವೇ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಮುಗಿಸುವಂತೆ ಹೇಳಿದ ಅವರು ಜನವರಿ 30ರ ಒಳಗೆ ಈ ಕಾಮಗಾರಿ ಮುಗಿಯಬೇಕು. ಅದಕ್ಕೆ ಬೇಕಾದ ತಯಾರಿಯನ್ನು ಮಾಡುವಂತೆಯೂ ಸೂಚಿಸಿದರು.

ಅಧಿಕಾರಿಗಳ ನಡುವೆ ಹೊಂದಾಣಿಕೆ ಮುಖ್ಯ. ಎಲ್ಲರೂ ಒಂದೇ ದೃಷ್ಟಿಯಿಂದ ಕೆಲಸ ಮಾಡಿದರೆ ಮಾತ್ರ ಈ ಕಾಮಗಾರಿ ಮುಗಿಯುತ್ತದೆ ಹೊರತು ಇಲ್ಲವಾದರೆ ವ್ಯರ್ಥವಾಗುತ್ತದೆ ಎಂದರು.

ಈ ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ, ಲೋಕೋಪಯೋಗಿ ಇಲಾಖೆ, ಟಿಪಿಒ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.