Home » Website » News from jrlobo's Office » ಕುದ್ರೋಳಿಯಲ್ಲಿ ಪೂಜೆ ಸಲ್ಲಿಸಿದ ಮಿಥುನ್ ರೈ ಕುಟುಂಬ
ಕುದ್ರೋಳಿಯಲ್ಲಿ ಪೂಜೆ ಸಲ್ಲಿಸಿದ ಮಿಥುನ್ ರೈ ಕುಟುಂಬ
Image from post regarding ಕುದ್ರೋಳಿಯಲ್ಲಿ ಪೂಜೆ ಸಲ್ಲಿಸಿದ ಮಿಥುನ್ ರೈ ಕುಟುಂಬ

ಕುದ್ರೋಳಿಯಲ್ಲಿ ಪೂಜೆ ಸಲ್ಲಿಸಿದ ಮಿಥುನ್ ರೈ ಕುಟುಂಬ

ಮಂಗಳೂರುಃ ಬ್ರಹ್ಮಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಶ್ರೀ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ದಕ್ಷಿಣ ಕನ್ನಡ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಲೋಕಸಭಾ ಅಭ್ಯರ್ಥಿ ಶ್ರೀ ಮಿಥುನ್ ಎಂ.ರೈ ರವರ ಕುಟುಂಬದವರು ವಿಶೇಷ ಪೂಜೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು.

ಅಭ್ಯರ್ಥಿ ಮಿಥುನ್ ರೈ ತಂದೆ ನಗರದ ಖ್ಯಾತ ವೈದ್ಯ ಡಾಕ್ಟರ್ ಮಹಾಬಲ ರೈ, ತಾಯಿ ಮಲ್ಲಿಕಾ ರೈ, ಧರ್ಮಪತ್ನಿ ಶರಣ್ಯ ರೈ ಅವರು ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ಕುದ್ರೋಳಿ ದೇವಸ್ಥಾನವನ್ನು ನವೀಕರಿಸಲು ಶ್ರಮಿಸಿದ ಹಿರಿಯ ಮುಖಂಡ ಶ್ರೀ ಬಿ.ಜನಾರ್ದನ ಪೂಜಾರಿಯವರ ಮಾತುಗಳನ್ನು ದೇವರು ನಡೆಸಿಕೊಡುವಂತಾಗಲಿ ಎಂದು ಅವರು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಗೋಕರ್ಣನಾಥ ದೇಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸಾಯಿರಾಂ, ಕಾರ್ಯದರ್ಶಿ ನ್ಯಾಯವಾದಿ ಪದ್ಮರಾಜ್, ಡಾ.ಬಿ.ಜಿ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Image from post regarding ಕುದ್ರೋಳಿಯಲ್ಲಿ ಪೂಜೆ ಸಲ್ಲಿಸಿದ ಮಿಥುನ್ ರೈ ಕುಟುಂಬ