Home » Website » News from jrlobo's Office » ಜೆಟ್ಟಿ ಆಳಗೊಳಿಸುವಂತೆ ಶಾಸಕ ಜೆ.ಆರ್.ಲೋಬೊ ಸೂಚನೆ
ಜೆಟ್ಟಿ ಆಳಗೊಳಿಸುವಂತೆ ಶಾಸಕ ಜೆ.ಆರ್.ಲೋಬೊ ಸೂಚನೆ
Image from post regarding ಜೆಟ್ಟಿ ಆಳಗೊಳಿಸುವಂತೆ ಶಾಸಕ ಜೆ.ಆರ್.ಲೋಬೊ ಸೂಚನೆ

ಜೆಟ್ಟಿ ಆಳಗೊಳಿಸುವಂತೆ ಶಾಸಕ ಜೆ.ಆರ್.ಲೋಬೊ ಸೂಚನೆ

ಮಂಗಳೂರು: ಮಂಗಳೂರು ಹಳೆಬಂದರಿನಲ್ಲಿ ಜೆಟ್ಟಿ ಕೇವಲ 9 ಮೀಟರ್ ಮಾತ್ರ ಆಳವಿದ್ದು ಇದನ್ನು ಕೂಡಲೆ ಆಳಗೊಳಿಸಿ ದೂಡ್ಡದಾದ ಮಂಜಿಗಳು ಬರುವಂತೆ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ತಮ್ಮ ಕಚೇರಿಯಲ್ಲಿ ಬಂದರು, ಮೀನುಗಾರಿಕೆ ಅಧಿಕಾರಿಗಳು ಮತ್ತು ಮೀನುಗಾರರ ಸಭೆ ನಡೆಸಿ ಮಾತನಾಡುತ್ತಿದ್ದರು.
ಅಳಿವೆ ಬಾಗಿಲಲ್ಲಿ ಮುಳುಗಿರುವ ದೋಣಿಗಳನ್ನು ತೆರವು ಮಾಡಬೇಕು. ಇಲ್ಲಿ ಸರಾಗವಾಗಿ ದೋಣಿಗಳು ಸಂಚಾರ ಮಾಡಲು ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಈ ಮೊದಲು ಶಾಸಕರು ಜೆಟ್ಟಿ ಪ್ರದೇಶದಲ್ಲಿ ಕುಡಿಯುವ ನೀರು, ಟಾಯಲೆಟ್ ವ್ಯವಸ್ಥೆ ಮಾಡುವಂತೆ ತಿಳಿಸಿದ್ದರೂ ಅಧಿಕಾರಿಗಳು ಅದನ್ನು ಪಾಲಿಸದಿರುವ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ತೀವೃ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ ಇನ್ನೊಂದು ವಾರದೊಳಗೆ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವಂತೆ ತಾಕೀತು ಮಾಡಿದರು.

ದೇವಿಮರೈನ್ ಪರಿಸರದಲಿ ಟಾಯಲೆಟ್ ಮತ್ತು ಸಿಸಿ ಕೆಮರಾ ಅಳವಡಿಸುವಂತೆಯೂ ಶಾಸಕರು ಸೂಚಿಸಿದರು. ಮೀನುಗಾರರಿಗೆ ಮಂಜೂರಾಗಿರುವ 23 ಶೇಡ್ ಗಳನ್ನು ಮೀನುಗಾರಿಕೆ ಸಚಿವರನ್ನು ಕರೆದು ಅವರ ಮೂಲಕವೇ ಹಸ್ತಾಂತರಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಬೆಂಗರೆ ಮಹಾಜನಸಭಾದ ಅಧ್ಯಕ್ಷ ಮೋಹನ್ ಬೆಂಗ್ರೆ, ಶೇಖರ್ ಸುವರ್ಣ, ಚೇತನ್ ಬೆಂಗ್ರೆ, ಮಂಜಿಯ ಸಂಘದ ಅಧ್ಯಕ್ಷ ಅಬ್ದುಲ್ ಲತೀಫ್, ಹಾಗೂ ಬಂದರು. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.