Home » Website » News from jrlobo's Office » ಪಡೀಲ್-ಕಂಕನಾಡಿ ರೈಲ್ವೇ ಸ್ಟೇಶನ್ ರಸ್ತೆ ಅಗಲೀಕರಣ ಜನವರಿಯಲ್ಲಿ ಪೂರ್ಣ: ಶಾಸಕ ಜೆ.ಆರ್.ಲೋಬೊ
ಪಡೀಲ್-ಕಂಕನಾಡಿ ರೈಲ್ವೇ ಸ್ಟೇಶನ್ ರಸ್ತೆ ಅಗಲೀಕರಣ ಜನವರಿಯಲ್ಲಿ ಪೂರ್ಣ: ಶಾಸಕ ಜೆ.ಆರ್.ಲೋಬೊ
Image from post regarding ಪಡೀಲ್-ಕಂಕನಾಡಿ ರೈಲ್ವೇ ಸ್ಟೇಶನ್ ರಸ್ತೆ ಅಗಲೀಕರಣ ಜನವರಿಯಲ್ಲಿ ಪೂರ್ಣ: ಶಾಸಕ ಜೆ.ಆರ್.ಲೋಬೊ

ಪಡೀಲ್-ಕಂಕನಾಡಿ ರೈಲ್ವೇ ಸ್ಟೇಶನ್ ರಸ್ತೆ ಅಗಲೀಕರಣ ಜನವರಿಯಲ್ಲಿ ಪೂರ್ಣ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಪಡೀಲ್- ಕಂಕನಾಡಿ ರೈಲ್ವೇ ಸ್ಟೇಷನ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ರಸ್ತೆಯನ್ನು 3 ಮೀಟರ್ ಅಗಲಕ್ಕೆ ವಿಸ್ತರಿಸುವಂತೆ ಹೇಳಿದರು.

ಜನರಿಗೆ ಇದರಿಂದ ಉಪಯೋಗವಾಗಲಿದೆ. ಈ ಕಾಮಗಾರಿಯನ್ನು ಜನವರಿ 30 ರ ಒಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಬಿಟ್ಟುಕೊಡಬೇಕು ಎಂದು ಅವರು ಕಾಲಮಿತಿ ಹಾಕಿದರು.

ಫಳ್ನೀರ್ ರಸ್ತೆಯನ್ನು ಮಾರ್ಚ್ ಒಳಗೆ ಮುಗಿಸುವಂತೆ ಹೇಳಿದ ಶಾಸಕ ಜೆ.ಆರ್.ಲೋಬೊ ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಇದನ್ನು ಶೀಘ್ರವಾಗಿ ಮಾಡುವಂತೆ ಹೇಳಿದರು.

ಸ್ಟರಕ್ ರೋಡ್ ಕಾಮಗಾರಿಯನ್ನು ಇನ್ನು ಒಂದೆರಡು ದಿನಗಳಲ್ಲಿ ಕೈಗೆತ್ತಿಕೊಳ್ಳುವಂತೆ ತಿಳಿಸಿದ ಅವರು ಈ ಎಲ್ಲಾ ಕಾಮಗಾರಿಗಳನ್ನು ಅಧಿಕಾರಿಗಳು ಮುತುವರ್ಜಿಯಿಂದ ಮಾಡುವಂತೆ ಸಹಲೆ ಮಾಡಿದರು.

ಶಾಸಕ ಜೆ.ಆರ್.ಲೋಬೊ ಅವರು ನಗರದ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿ ಎಲ್ಲಾ ಕಾಮಗಾರಿಗಳನ್ನು ಜನರಿಗೆ ಉಪಯೋಗವಾಗುವಂತೆ ಮಾಡಬೇಕೆಂದರು.