ಮಂಗಳೂರು ನಗರದ ಬಿಜೈಯಲ್ಲಿ ಕಳೆದ ಹ¯ ವಾರು ವರ್ಷಗಳಿಂದ ತೀರ್ವವಾಗಿ ಹದಗೆಟ್ಟಿದ್ದ ಭಾರತೀನಗರದ ಮುಖ್ಯ ರಸ್ತೆಯನ್ನು 70 ಲಕ್ಷ ಎಸ್ ಎಪ್ಸಿ ಅನುದಾನದ ಮುಖಾಂತರ ಕಾಂಕ್ರೀಟೀಕರಣಗೊಳಿಸಲಾಯಿತು ಈ ಕಾಂಕ್ರೀಟ್ ರಸ್ತೆಯನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊ ರವರು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಂಗಳೂರಿನ ಮೇಯರ್ ಶ್ರೀ ಮಹಾಬಲ ಮಾರ್ಲರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹದಗೆಟ್ಟಿರುವ ಎಲ್ಲಾ ಮುಖ್ಯ ರಸ್ತೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಕೈಗೆತ್ತಲಾಗುವುದು ಹಾಗೂ ಮಂಗಳೂರು ನಗರದ ಸುಂದರೀಕರಣಕ್ಕೆ ಶ್ರಮಿಸಲಾಗುದು ಎಂದು ನುಡಿದರು. ಈ ಸಂಧರ್ಭದಲ್ಲಿ ಸ್ಥಳೀಯ ಕಾಪೆರ್Çೀರೆಟರ್ರಾದ ಪ್ರಕಾಶ್ ಸಾಲ್ಯಾನ್, ಕಾಪೆರ್Çೀರೆಟರ್ಗಳಾದ ಲಾನ್ಸೀಲಾಟ್ ಪಿಂಟೋ, ರಜನೀಶ್ ಸ್ಥಳೀಯರಾದ ಡಾ.ಕೆ. ವಿ.ರಾವ್ ಚಂದ್ರಶೇಖರ್ ಜೈತೋಟ ವಿಷ್ಣು ಶರ್ಮಾ ಮುಂತಾದವರು ಹಾಜರಿದ್ದರು.

Image from Post Regarding ಬಿಜೈ ಭಾರತೀನಗರದ ಮುಖ್ಯ ರಸ್ತೆಯನ್ನು 70 ಲಕ್ಷ ಎಸ್ ಎಪ್ಸಿ ಅನುದಾನದ ಮುಖಾಂತರ ಕಾಂಕ್ರೀಟೀಕರಣಗೊಳಿಸಲಾಯಿತು