Home » Website » News from jrlobo's Office » ವಿದ್ಯಾಥಿಗಳು ಶಿಸ್ತನ್ನು ಪಾಲಿಸಬೇಕು : ಜೆ.ಆರ್.ಲೋಬೊ
JRLobo
Photography of JRLobo in office

ವಿದ್ಯಾಥಿಗಳು ಶಿಸ್ತನ್ನು ಪಾಲಿಸಬೇಕು : ಜೆ.ಆರ್.ಲೋಬೊ

ಮಂಗಳೂರು: ವಿದ್ಯಾರ್ಥಿಗಳು ತಮ್ಮ ಜೀವನದ ಉದ್ದಕ್ಕೂ ಶಿಸ್ತನ್ನು ಪಾಲಿಸಬೇಕು. ಅದರೊಂದಿಗೆ ದೇಶದ ರಕ್ಷಣೆ ಮಾಡುವ ಕಾರ್ಯವನ್ನು ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಬೆಂಗ್ರೆಯಲ್ಲಿ ಭಾರತ ಸೇವಾದಳದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ದೇಶಸೇವೆ ಮಾಡುವ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸಿದಾಗ ಮಾತ್ರ ಸೇವಾ ದಳಕ್ಕೆ ಅರ್ಥಬರುತ್ತದೆ ಎಂದರು.

ಶಶಿಕುಮಾರ ಬೆಂಗ್ರೆಯವರು ಮಾತನಾಡಿ ಬೆಂಗ್ರೆಯಂಥ ಪ್ರದೇಶದಲ್ಲಿ ಭಾರತ ಸೇವಾ ದಳದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಪ್ರದೇಶದಲ್ಲಿ ಅನೇಕ ಕ್ರೀಡೆಗಳಲ್ಲಿ ಆಸಕ್ತಿಯುಳ್ಳವರು ಇದ್ದಾರೆ. ಸರಿಯಾದ ದೊಡ್ಡ ಮೈದಾನ ಈ ಪ್ರದೇಶಕ್ಕೆ ಅಗತ್ಯವಿದೆ ಎಂದು ನುಡಿದರು.