ಮಂಗಳೂರು, ನ.16: ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ವಿಶೇಷ ಮುತುವರ್ಜಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ 25 ಲಕ್ಷ ಅನುದಾನದಲ್ಲಿ ಶಕ್ತಿನಗರ ಪದವಿನ ಪ್ರೀತಿನಗರದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟನೆಗೊಳಿಸಿದರು. ಈ ಸಂದರ್ಭದಲ್ಲಿ ವಿಶ್ವಾಸ್ ಕುಮಾರ್ ದಾಸ್, ಸ್ಥಳೀಯ ಮ.ನ.ಪಾ ಸದಸ್ಯರಾದ ಶ್ರೀಮತಿ ಅಖಿಲಾ ಆಳ್ವ, ಜೊನ್ ಬ್ಯಾಪ್ಟಿಸ್ಟ್ ಡಿ’ಸೋಜ, ಅರುಣ್ ಕುವೆಲ್ಲೊ, ಟಿ.ಕೆ ಸುಧೀರ್, ರಮಾನಂದ, ಶೈಲೇಶ್ ಆಳ್ವ, ಕ್ರತಿನ್ ಕುಮಾರ್, ಶೇಖರ್ ಪೂಜಾರಿ, ಯಶವಂತ, ಪೌಲಿನ್, ಸ್ಯಾಂಡ್ರ ಉಪಸ್ಥಿತರಿದ್ದರು.

Image from Post Regarding ಶಕ್ತಿನಗರ ಪದವಿನ ಪ್ರೀತಿನಗರದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟನೆಗೊಳಿಸಿದರು