Home » Website » News from jrlobo's Office » ಶಾಸಕ ಜೆ.ಆರ್.ಲೋಬೊ ಅವರು ಆಧಾರ್ ಪಡೆಯಲು ಅಧಿಕಾರಿಗಳ ಸಭೆ ನಡೆಸಿದರು
ಶಾಸಕ ಜೆ.ಆರ್.ಲೋಬೊ ಅವರು ಆಧಾರ್ ಪಡೆಯಲು ಅಧಿಕಾರಿಗಳ ಸಭೆ ನಡೆಸಿದರು
Image from post regarding ಶಾಸಕ ಜೆ.ಆರ್.ಲೋಬೊ ಅವರು ಆಧಾರ್ ಪಡೆಯಲು ಅಧಿಕಾರಿಗಳ ಸಭೆ ನಡೆಸಿದರು

ಶಾಸಕ ಜೆ.ಆರ್.ಲೋಬೊ ಅವರು ಆಧಾರ್ ಪಡೆಯಲು ಅಧಿಕಾರಿಗಳ ಸಭೆ ನಡೆಸಿದರು

ನೀವು ಇದ್ದಲ್ಲಿಗೇ ಆಧಾರ್ ಪಡೆಯಲು ಶಾಸಕ ಜೆ.ಆರ್.ಲೋಬೊ ವಿನೂತನ ಕ್ರಮ

ಮಂಗಳೂರು: ಮಂಗಳೂರಲ್ಲಿ ಆಧಾರ ಮಾನ್ಯತೆ ಪಡೆಯಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪ್ರತೀ ದಿನಕ್ಕೊಂದು ಕಡೆಗಳಲ್ಲಿ ಆಧಾರ್ ಅದಾಲತ್ ಗಳನ್ನು ಆಯೋಜಿಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಕದ್ರಿಯಲ್ಲಿ ತಮ್ಮ ಕಚೇರಿಯಲ್ಲಿ ಆಧಾರ್ ಮಾಹಿತಿ ಪಡೆದುಕೊಂಡು ಅದೆಷ್ಟೋ ಜನರಿಗೆ ಆಧಾರ್ ಪತ್ರ ಪಡೆಯಲು ಆಗಿಲ್ಲ. ಆಧಾರ್ ನೀಡುವಲ್ಲಿ ವಿಳಂಭವಾಗುತ್ತಿದ್ದು ಶಾಲೆ, ಕಾಲೇಜುಗಳಿಗೆ ಸೇರಲು ತೊಂದರೆಯಾಗುತ್ತಿದೆ. ಸರ್ಕಾರ ಆಧಾರ್ ಕಡ್ಡಾಯ ಮಾಡುತ್ತಿದ್ದು ಇನ್ನು ವಿಳಂಭವಾಗುವುದನ್ನು ತಡೆಗಟ್ಟಲು ಪ್ರತಿಯೊಂದು ಕಡೆಗಳಲ್ಲಿ 2 ಕಿಟ್ ಅಳವಡಿಸಿ ಪ್ರತೀ ಕಿಟ್ ನಲ್ಲಿ 35 ರಂತೆ 70- 80 ಜನರು ಆಧಾರ್ ಪಡೆಯಲು ಅನುವು ಮಾಡಿಕೊಡುವಂತೆ ಸೂಚಿಸಿದರು.

ಮಂಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದಿನಕ್ಕೊಂದು ಕಡೆ ಆಧಾರ್ ಮಾಡಿಕೊಡಬೇಕು. ಇನ್ನೊಂದು ದಿನ ಬೇರೆ ಕಡೆಗೆ ಹೋಗಬೇಕು. ಅವಕಾಶ ಸಿಗದವರಿಗೆ ಮತ್ತೊಂದು ಸಂದರ್ಭದಲ್ಲಿ ಮತ್ತೆ ಆಧಾರ್ ಪತ್ರಕೊಡಲು ಆಗಬೇಕು ಎಂದರು.

ಯಾವುದೇ ಕಾರಣಕ್ಕೂ ಆಧಾರ್ ಸಿಗಲಿಲ್ಲ ಅಥವಾ ಮಾಡಿಸುವ ಅವಕಾಶ ಸಿಕ್ಕಿಲ್ಲ ಎಂದು ದೂರುಗಳು ಕೇಳಿ ಬರಬಾರದು. ಇನ್ನೊಂದು ವಾರದಲ್ಲಿ ಆಧಾರ್ ಪತ್ರ ಕೊಡುವ ಬಗ್ಗೆ ಪೂರ್ವ ತಯಾರಿ ಮಾಡಿಕೊಂಡು ಯಾವ ಪ್ರದೇಶಕ್ಕೆ ಬರುತ್ತೀರಿ ಎನ್ನುವುದನ್ನು ಮುಂಚಿತವಾಗಿ ತಿಳಿಸುವಂತೆಯೂ ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅಂಗನವಾಡಿ, ಶಾಲೆ, ಪಂಚಾಯತ್ ಕಚೇರಿಗಳನ್ನು ಆಯ್ಕೆಮಾಡಿಕೊಂಡು ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಯುದ್ದೋಪಾದಿಯಲ್ಲಿ ಆಧಾರ್ ಕೊಡುವ ಕೆಲಸ ಮಾಡುವಂತೆ ತಿಳಿಸಿದರು.