Home » Website » News from jrlobo's Office » ಶಾಸಕ ಲೋಬೊ ರವರ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ಜತೆ ಪೊಲೀಸ್ ಅಯುಕ್ತರ ಭೇಟಿ
ಶಾಸಕ ಲೋಬೊ ರವರ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ಜತೆ ಪೊಲೀಸ್ ಅಯುಕ್ತರ ಭೇಟಿ
Image from post regarding ಶಾಸಕ ಲೋಬೊ ರವರ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ಜತೆ ಪೊಲೀಸ್ ಅಯುಕ್ತರ ಭೇಟಿ

ಶಾಸಕ ಲೋಬೊ ರವರ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ಜತೆ ಪೊಲೀಸ್ ಅಯುಕ್ತರ ಭೇಟಿ

ರಂಝಾನ್ ಉಪವಾಸದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ರವರ ನೇತೃತ್ವದಲ್ಲಿ ಮಸೀದಿಗಳ ಮುಖಂಡರು ನಗರದಲ್ಲಿ ಇಂದು ಪೊಲೀಸ್ ಆಯುಕ್ತರಾದ ಶ್ರೀ ಚಂದ್ರಶೇಖರ್ ರವರನ್ನು ಭೇಟಿಯಾದರು. ಉಪವಾಸದ ಸಮಯದಲ್ಲಿ ಮಸೀದಿಯಲ್ಲಿ ನಡೆಯುವ ವಿಶೇಷ ಪ್ರಾರ್ಥನೆಯ ಬಳಿಕ ಭಕ್ತರು ಮನೆಗೆ ಹೋಗುವ ಸಂದರ್ಭದಲ್ಲಿ ಅವರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುವಂತೆ ಮತ್ತು ಮಸೀದಿಯ ಬಳಿ ಪೊಲೀಸ್ ಗಸ್ತು ನಿಯೋಜಿಸುವಂತೆ ಕೋರಲಾಗಿದೆ. ಇದೇ ವೇಳೆ ಮೆಸ್ಕಾಂ ಅಧಿಕಾರಿಗಳಲ್ಲಿ ಪ್ರಾರ್ಥನೆಯ ಸಮಯ ಮತ್ತು ಅನಂತರ ಅನಾವಶ್ಯಕವಾಗಿ ವಿದ್ಯುತ್ ಕಡಿತಗೊಳಿಸದಂತೆ ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಶ್ರೀ ಕೆ.ಎಸ್. ಮುಹಮ್ಮದ್ ಮಸೂದ್, ಹನೀಪ್ ಹಾಜಿ ಬಂದರು, ಬಶೀರ್ ಅಹಮದ್, ಹಸನಬ್ಬ, ಅಹ್ಮದ್ ಬಾವ, ಡಿ.ಎಂ. ಅಸ್ಲಂ ಮುಂತಾದವರು ಉಪಸ್ಥಿತರಿದ್ದರು.

ಶಾಸಕ ಲೋಬೊ ರವರ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ಜತೆ ಪೊಲೀಸ್ ಅಯುಕ್ತರ ಭೇಟಿ
Image from post regarding ಶಾಸಕ ಲೋಬೊ ರವರ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ಜತೆ ಪೊಲೀಸ್ ಅಯುಕ್ತರ ಭೇಟಿ