Home » Website » News from jrlobo's Office » ಸುಂದರ ನಗರವನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ: ಜೆ.ಆರ್.ಲೋಬೊ
ಸುಂದರ ನಗರವನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ: ಜೆ.ಆರ್.ಲೋಬೊ
Image from post regarding ಸುಂದರ ನಗರವನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ: ಜೆ.ಆರ್.ಲೋಬೊ

ಸುಂದರ ನಗರವನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ: ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ನಗರವನ್ನು ಸರ್ವಾಂಗೀಣ ಸುಂದರ ನಗರವನ್ನಾಗಿ ಮಾಡಲು ನಗರಪಾಲಿಕೆಯೊಂದಿಗೆ ಎಲ್ಲಾ ಜನರ ಸಹಭಾಗಿತ್ವವೂ ಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಅವರು ಮರೋಳಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಉದ್ಘಾಟನೆಯನ್ನು ನೆರವೇರಿಸಿದರು.

ನಾಗೊರಿಯಿಂದ ದೇವಸ್ಥಾನಕ್ಕೆ ರಸ್ತೆ ಮಾಡಲು ಸರ್ವರ ಸಹಕಾರ ಸಿಕ್ಕಿದೆ. ಇಂಥದ್ದೇ ಸಹಾಯ, ಸಹಕಾರ ಪ್ರತಿಯೊಂದು ಕೆಲಸದಲ್ಲೂ ಸಿಗಬೇಕು ಎಂದು ಹೇಳಿದರು. ಅಭಿವೃದ್ಧಿಯ ಕೆಲಸ ಮಾಡುವಾಗ ಪಕ್ಷ ಭೇದ ಇರಬಾರದು. ನಿಮ್ಮೆಲ್ಲರ ಸಹಕಾರವನ್ನು ನಾನು ಅಭಿನಂದಿಸುತ್ತೇನೆ ಎಂದು ನುಡಿದ ಶಾಸಕ ಜೆ.ಆರ್.ಲೋಬೊ ಅವರು ಮುಂದಿನ ದಿನಗಳಲ್ಲೂ ನನ್ನಿಂದ ಆಗಬೇಕಾದ ಕೆಲಸವನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಉಪಮೇಯರ್ ಸುಮಿತ್ರ, ಪ್ರತಿಪಕ್ಷ ನಾಯಕಿ ರೂಪಾ ಡಿ.ಬಂಗೇರ, ಮುಖ್ಯಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸ್ ಲಾರ್ಟ್ ಪಿಂಟೊ, ಕಾರ್ಪೊರೇಟರ್ ಅಪ್ಪಿ, ಪ್ರಕಾಶ್, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ. ಸುಧೀರ್ ಮುಂತಾದವರಿದ್ದರು.