Home » Website » News from jrlobo's Office » ಸ್ಮಾರ್ಟ್ ಸಿಟಿಗಳಿಗೆ ಬಿಡುಗಡೆಯಾದ ಹಣ 1656 ಕೋಟಿ ಶಾಸಕ ಜೆ.ಆರ್.ಲೋಬೊ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವರ ಉತ್ತರ
JRLobo
Photography of JRLobo in office

ಸ್ಮಾರ್ಟ್ ಸಿಟಿಗಳಿಗೆ ಬಿಡುಗಡೆಯಾದ ಹಣ 1656 ಕೋಟಿ ಶಾಸಕ ಜೆ.ಆರ್.ಲೋಬೊ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವರ ಉತ್ತರ

ಮಂಗಳೂರು: ಸ್ಮಾರ್ಟ್ ಸೀಟಿ ಯೋಜನೆಗೆ ರಾಜ್ಯದ ಆರು ನಗರಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಲ್ಲಿಯವರೆಗೆ 1656 ಕೋಟಿ ರೂಪಾಯಿ ಬಿಡಗಡೆ ಮಾಡಿದ್ದು ಈ ಪೈಕಿ ಮಂಗಳೂರಿಗೆ 216 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವರು ಶಾಸಕ ಜೆ.ಆರ್.ಲೋಬೊ ಅವರಿಗೆ ವಿಧಾನ ಸಭೆಯಲ್ಲಿ ಉತ್ತರಿಸಿದ್ದಾರೆ.

ಶಾಸಕರ ಪ್ರಶೆಗೆ ಉತ್ತರಿಸಿರುವ ಸಚಿವರು ಇಲ್ಲಿಯವರೆಗೆ ಮಂಗಳೂರು ನಗರದಲ್ಲಿ 3.13 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿಗೆ ರಾಜ್ಯ ಸರ್ಕಾರ 105 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರೆ ಕೇಂದ್ರ ಸರ್ಕಾರ 111 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದಿದ್ದಾರೆ.

ಪ್ರತೀ ಸ್ಮಾರ್ಟ್ ಸಿಟಿಗೆ ಸ್ಮಾರ್ಟ್ ಸಿಟಿ ಪರಿಶೀಲನೆ ಮತ್ತು ಮೇಲ್ವಿಚಾರಣೆ ಸಮಿತಿಯಿದ್ದು ಈ ಸಮಿತಿಗೆ ಪ್ರದೇಶದ ಶಾಸಕರು ಸದಸ್ಯರಾಗಿರುತ್ತಾರೆ ಎಂದು ಸಚಿವರು ಉತ್ತರಿಸಿದ್ದಾರೆ.

ಸ್ಮಾರ್ಟ್ ಸಿಟಿಗಳನ್ನಾಗಿ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ -ಧಾರವಾಡ, ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳನ್ನು ಆಯ್ಕೆ ಮಾಡಲಾಗಿದೆ.