Home » Website » News from jrlobo's Office » ಹಮಾಲಿ ಕಾರ್ಮಿಕರ ಗುರುತಿನ ಚೀಟಿ ವಿತರಣೆ
ಹಮಾಲಿ ಕಾರ್ಮಿಕರ ಗುರುತಿನ ಚೀಟಿ ವಿತರಣೆ
Image from post regarding ಹಮಾಲಿ ಕಾರ್ಮಿಕರ ಗುರುತಿನ ಚೀಟಿ ವಿತರಣೆ

ಹಮಾಲಿ ಕಾರ್ಮಿಕರ ಗುರುತಿನ ಚೀಟಿ ವಿತರಣೆ

ಕಳೆದ ಹಲವಾರು ವರ್ಷಗಳಿಂದ ಹಮಾಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಅನೇಕ ನೂರಾರು ಕಾರ್ಮಿಕರು ಗುರುತಿನ ಚೀಟಿ ಇಲ್ಲದೆ ಹಲವಾರು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಈ ಬಗ್ಗೆ ಹಮಾಲಿ ಸಂಘದವರು ಶಾಸಕರಿಗೆ ಮನವಿ ನೀಡಿದ್ದರು. ಮನವಿಗೆ ಸ್ಪಂದಿಸಿದ ಶಾಸಕರು ಈ ಬಗ್ಗೆ ಕಾರ್ಮಿಕ ಇಲಾಖೆ ಹಾಗೂ ಎ.ಪಿ.ಎಮ್.ಸಿ ಅಧಿಕಾರಿಗಳ ಜೊತೆ ಸಭೆಗಳನ್ನು ನಡೆಸಿ ಅವರಿಗೆ ದೊರಕುವ ಸರಕಾರ ಸೌಲಭ್ಯಗಳನ್ನು ದೊರಕುವಂತೆ ಅವರಿಗೆ ಗುರುತಿನ ಚೀಟಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈಗಾಗಲೇ 89 ಮಂದಿ ಅರ್ಹ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹಮಾಲಿ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗುವುದು. ಈ ಮೂಲಕ ಹಮಾಲಿ ಕಾರ್ಮಿಕರ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಪೋರೇಟರಾದ ಅಬ್ದುಲ್ ಲತೀಫ್, ಎ.ಪಿ.ಎಮ್.ಸಿ ಅಧ್ಯಕ್ಷರಾದ ಪ್ರಮೋದ್ ಕುಮಾರ್, ಸದಸ್ಯರಾದ ಭರತೇಶ್ ಅಮಿನ್, ಶ್ರೀಮತಿ ಪ್ರತಿಭಾ ರಾಜ್ ಕುಮಾರ್, ಜಯಶೀಲ, ಹಮಾಲಿ ಶ್ರಮಿಕ ಸಂಘದ ಅಧ್ಯಕ್ಷರಾದ ಇಮ್ತಿಯಾಝ್ ಬಿ.ಕೆ, ಸುನಿಲ್ ಕುಮಾರ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.